ಕೊರೊನಾ ಹರಡುವಿಕೆ ಕಡಿಮೆ ಮಾಡಲು ಸರ್ಕಾರಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿವೆ. ಹಾಗಾಗಿ ರಾಜ್ಯದಲ್ಲಿ ಬಾರ್, ನೈಟ್ ಕ್ಲಬ್, ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಕೊರೊನಾ ಎಫೆಕ್ಟ್ ನಿಂದಾಗಿ ನಡೆಯಬೇಕಾಗಿದ್ದ ಮದುವೆ, ಹುಟ್ಟು ಹಬ್ಬದ ಆಚರಣೆಗಳು, ನಾಮಕರಣದಂತ ಕಾರ್ಯಕ್ರಮಗಳನ್ನು ಸ್ಟಾಪ್ ಮಾಡಿದ್ದಾರೆ. ಆದರೆ ಕೆಲವೊಂದು ಕಡೆ ಮದುವೆ ಮೂರ್ಹತ ಫಿಕ್ಸ್ ಆಗಿರುವದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮದುವೆ ಮಾಡಲು ಬೇರೆ ರೀತಿಯ ಪ್ಲ್ಯಾನ್ ಗಳನ್ನು ಮಾಡುತ್ತಿದ್ದಾರೆ. ಕೊರೊನಾ ಭೀತಿ ಹೆಚ್ಚಿದಂತೆ ಮದುವೆಗಳಲ್ಲಿ ಮಾಸ್ಕ್ ಧರಿಸುತ್ತಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ವಿಡಿಯೋ ಕಾಲ್ ಮಾಡುವ ಮೂಲಕ ಮದುವೆ ಮಾಡಿಕೊಂಡಿರುವುದು ತೆಲಂಗಾಣದಲ್ಲಿ ಸಾಕಷ್ಟು ಸುದ್ದಿಯಾಗಿದೆ.
ವಿಡಿಯೋ ಕಾಲ್ ನಲ್ಲಿ ಮದುವೆ ಆಗಿರುವ , ವರ ಮೊಹಮ್ಮದ್ ಅಡ್ನಾನ್ ಖಾನ್ ಕಳೆದ ಐದು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಭೀತಿಯಿಂದ ಆ ದೇಶದಲ್ಲಿ ನಿರ್ಬಂಧ ಹೇರಲಾಗಿದೆ. ಆದ್ದರಿಂದ ವರ ಮತ್ತು ಆತನ ಕುಟುಂಬ ಮದುವೆ ದಿನಾಂಕಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ವಧು-ವರ ವೀಡಿಯೊ ಕರೆ ಮೂಲಕ ನಿಕಾ ಮಾಡಿಕೊಂಡಿದ್ದಾರೆ.








