ಬೆಂಗಳೂರು : ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವಣ್ಣ ಎಂದರೆ ನಮಗೆ ಮೊದಲಿಗೆ ನೆನಪಾಗೋದು ಅವರ ಎನರ್ಜಿ ಮತ್ತು ಡ್ಯಾನ್ಸ್. 57ನೇ ವಯಸ್ಸಿನಲ್ಲೂ ಎಸ್ ಆರ್ ಕೆ, ಯುವಕರನ್ನು ನಾಚಿಸುವಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ. ಈಗ ಅವರು ಮನೆಯಲ್ಲಿ ತಾಲೀಮು ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ವರ್ಕೌಟ್ ವಿಡಿಯೋವನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋದಲ್ಲಿ ಶಿವಣ್ಣ ಅವರು, ಮೊದಲು ಕತ್ತಿಗೆಗೆ ವ್ಯಾಯಾಮ ಮಾಡಿ ನಂತರ ತೂಕವನ್ನು ಹಿಡಿದು ಸೈಡ್ ಫ್ಯಾಟ್ ಗೆ ವ್ಯಾಯಾಮ ಮಾಡುತ್ತಾರೆ. ತದನಂತರ ಮೆಷಿನ್ ಮೇಲೆ ಮಲಗಿ ಹೊಟ್ಟೆಗೆ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಈ ವಿಡಿಯೋ ನೋಡಿದ ಶಿವಣ್ಣನ ಅಭಿಮಾನಿಗಳು ಫಿದಾ ಆಗಿದ್ದು, ನೀವು ಈ ವಯಸ್ಸಿನಲ್ಲೂ ನಮಗೆ ಸ್ಫೂರ್ತಿಯಾಗುತ್ತೀರಾ ಶಿವಣ್ಣ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ನಮಗೆ ಎನರ್ಜಿ ಬೂಸ್ಟರ್ ಎಂದು ಕಮೆಂಟ್ ಮಾಡಿದ್ದಾರೆ. ಈಗ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಶಿವಣ್ಣ ಸದ್ಯ ರವಿ ಅರಸು ನಿರ್ದೇಶನ ಮಾಡಿರುವ ಆರ್.ಡಿ.ಎಕ್ಸ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.








