ಬಿರಗಾಳಿ ಸಹಿತ ಮಳೆಗೆ ಸಿಲುಕಿ ವಿದ್ಯಾರ್ಥಿನಿಯರ ಪಾಡು ಅವಾಂತರ
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿನ್ನೆ (ಬುಧವಾರ) ಸಂಜೆ ಗಾಳಿ, ಆನೆಕಲ್ ಸಹಿತ ಮಳೆಯಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿನ್ನೆ (ಬುಧವಾರ) ಸಾಯಂಕಾಲ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಸಿಲುಕಿ ವಿದ್ಯಾರ್ಥಿನಿಯರು ಪರದಾಡಿರುವ ವಿಡಿಯೋ ವೈರಲ್ ಆಗಿದೆ.
ಸಾಯಂಕಾಲ ಸ್ಕೂಟಿಯಲ್ಲಿ ವಿದ್ಯಾರ್ಥಿನಿಯರು ವಿದ್ಯಾನಗರಕ್ಕೆ ಬರುತ್ತಿದ್ದರು. ಈ ವೇಳೆ ಬಿರುಗಾಳಿ ಸಹಿತ ಮಳೆ ಶುರುವಾಗಿದೆ. ನೋಡುನೋಡುತ್ತಿದ್ದಂತೆ ಗಾಳಿ ಸುತ್ತುವರೆದಿದ್ದು, ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿದೆ. ಹೀಗಾಗಿ ಸ್ಕೂಟಿ ಸಮೇತ ಕೆಳಗೆ ಹಾರಿ ಬಿದ್ದರು. ನಂತರ ಬಿರುಗಾಳಿಯ ರಭಸಕ್ಕೆ ಸ್ಕೂಟಿ ಸ್ವಲ್ಪ ಅಂತರ ಎಳೆದು ಹೋಗಿದೆ.
ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಕೂಡಲೇ ವಿದ್ಯಾರ್ಥಿನಿಯರ ಸಹಾಯಕ್ಕೆ ಧಾವಿಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಹಾಗೇ ಮೈಸೂರು ಜಿಲ್ಲೆಯಲ್ಲಿ ತಡರಾತ್ರಿ ಗಾಳಿಸಹಿತ ಭಾರಿ ಮಳೆಯಾಗಿದೆ, ನಂಜನಗೂಡು ತಾಲೂಕಿನ ಬಂಚಹಳ್ಳು ಗ್ರಾಮದಲ್ಲಿ ಹುಂಡಿ ಗ್ರಾಮದ ಕೆಂಪಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಮನೆಯಲ್ಲಿದ್ದವರು ಪಾರಾಗಿದ್ದಾರೆ. ಇನ್ನೂ ಬಿರುಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿರುವ ಘಟನೆಗಳು ಕಂಡು ಬಂದಿವೆ.
ಇನ್ನೂ ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಬೀಳಗಿ ತಾಲೂಕಿನ ಕೊರ್ತಿಯಲ್ಲಿ ನೆರೆಯ ಸಂತ್ರಸ್ತರ ತಾತ್ಕಾಲಿಕ್ ಶೆಡ್ ಗಳು ಹಾರಿ ಹೋಗಿವೆ. ಗ್ರಾಮದ ಬಳಿ ರಸ್ತೆಯ ಅಕ್ಕಪಕ್ಕದಲ್ಲಿ ಶೆಡ್ ಗಳಲ್ಲಿ ವಾಸವಿದ್ದ ಪ್ರವಾಹ ಸಂತ್ರಸ್ತರ ನೂರಕ್ಕೂ ಹೆಚ್ಚು ಶೆಡ್ಗಗಳು ಹಾರಿ ಹೋಗಿದ್ದು, ಬಹುತೇಕ ಶೆಡ್ಗಳು ಧ್ವಂಸವಾಗಿ ಆಹಾರ ಧಾನ್ಯ ಹಾಳಾಗಿವೆ.