ಸದ್ಯ ಬಾಲಿವುಡ್ ನಲ್ಲಿ ಸೆನ್ಷೇಷನಲ್ ಸ್ಟಾರ್ ದೇವರಕೊಂಡ ಸೆನ್ಷೇಷನ್ ದಿನೇ ದಿನೇ ಹೆಚ್ಚಾಗ್ತಿದೆ.. ಕಳೆದ ಎರೆಡು ಮೂರು ವಾರಗಳಿಂದಲೂ ವಿಜಯ್ ದೇವರಕೊಂಡ ಲೈಗರ್ ಪ್ರಮೋಷನ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.. ಆದ್ರೆ ಅವರು ಶೂಟಿಂಗ್ ಸಂದರ್ಭದಲ್ಲೇ ಗಾಯಗೊಂಡಿದ್ದರು ಎಂಬ ವಿಚಾರವನ್ನ ತ್ತೀಚೆಗೆ ಅವರೇ ಹೇಳಿಕೊಂಡಿದ್ದಾರೆ..
ಹೌದು..! ಇನ್ನೂ 6 ತಿಂಗಳು ವರ್ಕೌಟ್ ಸಹ ಮಾಡಬಾರದು ಅಂತ ಹೇಳಿಕೊಂಡಿದ್ಧಾರೆ.. ಹೀಗಿದ್ದರೂ ಅವರು ಬಿಡುವಿಲ್ಲದೇ ಪ್ರಚಾರ ಮಾಡುತ್ತಿರುವುದಕ್ಕೆ ಅವರ ಬದ್ಧತೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ವಿಜಯ್ ದೇವರಕೊಂಡ, ನಿಮ್ಮ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಗೊತ್ತಿಲ್ಲದ ಸತ್ಯವನ್ನು ಹೇಳಿ ಎಂದಾಗ, ನಾನು ನನ್ನ ದೇಹಕ್ಕೆ ಗಾಯ ಮಾಡಿಕೊಂಡಿದ್ದೇನೆ. ನಾನೀಗ ಅದರ ಚಿಕಿತ್ಸೆಯ ಹಂತದಲ್ಲಿದ್ದೇನೆ.. ಲೈಗರ್ ಸಿನಿಮಾಗಾಗಿ ನಾನು ಅತಿಯಾಗಿ ವರ್ಕೌಟ್ ಮಾಡಿದೆ.
ನಾನು ಎಷ್ಟು ಮಾಡಬೇಕಿತ್ತು ಅದಕ್ಕಿಂತಲೂ ಹೆಚ್ಚಾಗಿ ವರ್ಕೌಟ್ ಮಾಡಿದೆ. ನಾವು ಕೋವಿಡ್ ಗೆ ಮುಂಚೆ ಶೂಟಿಂಗ್ ಪ್ರಾರಂಭಿಸಿದ್ದು. ಆದರೆ ನಡುವಲ್ಲಿ ಕೋವಿಡ್ ಬಂತು ನಾನು ನನ್ನ ದೇಹಾಕಾರ ಕಳೆದುಕೊಳ್ಳುವಂತಿರಲಿಲ್ಲ. ಹಾಗಾಗಿ ಕಳೆದ ಮೂರು ವರ್ಷಗಳಲ್ಲಿ ನಾನು ನನ್ನ ತಡೆದುಕೊಳ್ಳಲಾರದಷ್ಟು ವರ್ಕೌಟ್ ಮಾಡಿದ್ದೇನೆ. ಅದರಿಂದ ನನ್ನ ದೇಹಕ್ಕೆ ಗಾಯವಾಗಿದೆ ,
ಪಾತ್ರಕ್ಕೆ ಇಂಥಹದ್ದು ಬೇಕೆಂದರೆ ಅದನ್ನು ಪೂರ್ಣವಾಗಿ ಕೊಡುವವರೆಗೆ ನಾನು ವಿಶ್ರಾಂತಿ ಪಡೆಯೋದಿಲ್ಲ…
ಹಾಗಾಗಿ ಜಿಮ್ ನಲ್ಲಿ ಪ್ರಾಣಿಯಂತೆ ವರ್ಕೌಟ್ ಮಾಡಿದ್ದೇನೆ. ಆದರೆ ಈಗ ಅದ್ಯಾವ ಹಂತ ತಲುಪಿದೆ ಎಂದರೆ ನನಗೆ ಇನ್ನು ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ದೇಹಕ್ಕೆ ನಾನು ಅತೀವವಾದ ಶ್ರಮ ಕೊಟ್ಟುಬಿಟ್ಟಿದ್ದೇನೆ. ಈಗೇನಿದ್ದರೂ ಅದಕ್ಕೆ ವಿಶ್ರಾಂತಿಯ ಅಗತ್ಯವಿದೆ. ಹಾಗಾಗಿ ಮುಂದಿನ ಕೆಲವು ತಿಂಗಳು ನಾನು ವರ್ಕೌಟ್‌ನಿಂದ ದೂರ ಉಳಿಯಲಿದ್ದೇನೆ. ಇನ್ನೂ 6 – 7 ತಿಂಗಳು ನಾನು ವರ್ಕೌಟ್ ಮಾಡುವಂತಿಲ್ಲ. ಅತಿಯಾಗಿ ದೇಹ ದಂಡಿಸುವಂತಿಲ್ಲ ಎಂದಿದ್ದಾರೆ.
ಇದೇ ವೇಳೆ ಮತ್ತೊಂದು ಸತ್ಯ ಬಿಚ್ಚಿಟ್ಟಿರುವ ನಟ , ನನಗೆ ಹುಡುಗಿಯರೆಂದರೆ ಬಹಳ ಭಯ ಇತ್ತು. ನಾನು ಯುವತಿಯರ ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡಲು ಅಜುತ್ತಿದ್ದೆ. ಎಲ್ಲರೂ ಹುಡುಗರೇ ಇದ್ದ ಶಾಲೆಯಲ್ಲಿ ಓದಿದ್ದ ನನಗೆ ಹುಡುಗಿಯರೆಂದರೆ ಬೇರೆ ಪ್ರಪಂಚದವರು ಎಂದೇ ಭಾವಿಸಿದ್ದೆ. ನನಗೆ ಹದಿನೆಂಟು ವರ್ಷ ತುಂಬುವವರೆಗೆ ನನಗೆ ಹುಡುಗಿಯರನ್ನು ನೋಡಲು, ಮಾತನಾಡಿಸಲು ಬಹಳ ಮುಜುಗರವಾಗುತ್ತಿತ್ತು ಎಂದಿದ್ದಾರೆ.