ವಿಜಯ್ ಹಜಾರೆ : ಕ್ವಾರ್ಟರ್ ಫೈನಲ್ ನಲ್ಲಿ ಎಡವಿದ ಕರ್ನಾಟಕ Vijay Hazare saaksha tv
ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ನಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಸೋಲನುಭಿಸಿದೆ.
ಕ್ವಾರ್ಟರ್ ನಲ್ಲಿ ಮನೀಷ್ ಪಡೆ ತಮಿಳುನಾಡು 151 ರನ್ಗಳಿಂದ ಸೋಲು ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ, ತಮಿಳುನಾಡು ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು.
ಆರಂಭದಲ್ಲಿ ಕರ್ನಾಟಕ ಬೌಲರ್ ಗಳು ಅಬ್ಬರಿಸಿದ್ದರು. ತಮಿಳುನಾಡಿನ ಬಾಬಾ ಅಪರಾಜಿತ್ 13 ರನ್ಗಳಿಸಿ ಪೆವಿಲಿಯನ್ ಸೇರಿದರು.
ಆದ್ರೆ ಬಳಿಕ ಕ್ರಿಸ್ ಗೆ ಬಂದ ನಾರಾಯಣ್ ಜಗದೀಸನ್ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ ಕರ್ನಾಟಕಕ್ಕೆ ಕಂಟಕವಾದರು.
2 ನೇ ವಿಕೆಟ್ ಗೆ ಈ ಜೋಡಿ ಬರೋಬ್ಬರಿ 147 ರನ್ ಗಳನ್ನು ಪೇರಿಸಿ ಕರ್ನಾಟಕ್ಕೆ ದಿಟ್ಟ ತಿರುಗೇಟು ನೀಡಿದರು.
ಈ ವೇಳೆ ಸಾಯಿಕಿಶೋರ್ 3 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 61 ರನ್ಗಳಿಸಿ ಔಟಾದರು. ಜಗದೀಸನ್ 101 ಎಸೆತಗಳಲ್ಲಿ 102 ರನ್ಗಳಿಸಿ ನಿರ್ಗಮಿಸಿದರು.
ದಿನೇಶ್ ಕಾರ್ತಿಕ್ 44 ರನ್ ಮತ್ತು ಬಾಬಾ ಇಂದ್ರಜಿತ್ 31 ರನ್ ಗಳಿಸಿ ಮಿಂಚಿದರು. ಆದರೆ ಶಾರೂಖ್ ಖಾನ್ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 79 ರನ್ಗಳಿಸಿ ತಮಿಳುನಾಡಿನ ಬೃಹತ್ ಮೊತ್ತಕ್ಕೆ ಕಾರಣರಾದರು.
ತಮಿಳುನಾಡು ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 354 ರನ್ಗಳಿಸಿತು. ಕರ್ನಾಟಕದ ಪರ ಪ್ರವೀಣ್ ದುಬೆ 3 ವಿಕೆಟ್ ಪಡೆದು ಮಿಂಚಿದರು.
ಈ ಬೃಹತ್ ಮೊತ್ತದ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲಿಯೇ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಾಗಿತು.
ದೇವದತ್ ಪಡಿಕಲ್ (0), ರೋಹನ್ ಕದಂ (24), ಕೆ.ವಿ ಸಿದ್ಧಾರ್ಥ್ (29) ಮತ್ತು ಮನೀಷ್ ಪಾಂಡೆ (9) ರನ್ ಗಳಿಸಿ ನಿರ್ಗಮಿಸಿದರು.
ಅಭಿನವ್ ಮನೋಹರ್ (34) ಮತ್ತು ಶ್ರೀನಿವಾಸ್ ಶರತ್ (43) ರನ್ಗಳಿಸಿದ್ದು ಬಿಟ್ಟರೆ ಬೇರೆಯವರಿಂದ ಹೆಚ್ಚಿನ ಕೊಡಗೆ ಬರಲಿಲ್ಲ.
ಅಂತಿಮ ಹಂತದಲ್ಲಿ ಪ್ರವೀಣ್ ದುಬೆ ಕೊನೆಯಲ್ಲಿ 26 ರನ್ಗಳಿಸಿದ್ರು. ಕರ್ನಾಟಕ 39 ಓವರುಗಳಲ್ಲಿ 203 ರನ್ಗಳಿಗೆ ಆಲೌಟ್ ಆಗಿ 151 ರನ್ ಸೋಲು ಅನುಭವಿಸಿತು.









