ಪೃಥ್ವಿ ಶಾ ಶತಕದ ದಾಹಕ್ಕೆ ಬ್ರೇಕ್ ಹಾಕಿದ ಶಿವಮ್ ಮಾವಿ..!
Vijay Hazare Trophy Final Prithvi Shaw c S Rizvi b Shivam Mavi 73run
ಒಂದು ಕಡೆ ನೋವು.. ಇನ್ನೊಂದು ಕಡೆ ತಂಡದ ಗೆಲುವು.. ಮತ್ತೊಂದೆಡೆ ಶತಕದ ದಾಹ.. ಅಷ್ಟೇ ಅಲ್ಲ. ಟೀಮ್ ಇಂಡಿಯಾವನ್ನು ಮತ್ತೆ ಸೇರಬೇಕು ಅನ್ನೋ ತವಕ.
ಗೊಂದಲ, ಮಾನಸಿಕ ಖಿನ್ನತೆ, ಬೇಸರ, ಕಣ್ಣೀರಿನೊಂದಿಗೆ ಈ ಬಾರಿಯ ವಿಜಯ ಹಜಾರೆ ಟೂರ್ನಿಯಲ್ಲಿ ಆಡಿದ್ದ ಆಟಗಾರ ಮುಂಬೈ ನಾಯಕ ಪೃಥ್ವಿ ಶಾ..
ಹಾಗೇ ನೋಡಿದ್ರೆ, ಪೃಥ್ವಿ ಶಾ ಈಗ ಇಂಗ್ಲೆಂಡ್ ಸರಣಿಯಲ್ಲಿ ಆಡಬೇಕಾಗಿತ್ತು. ಆದ್ರೆ ಆಸ್ಟ್ರೇಲಿಯಾ ಪ್ರವಾಸದಲ್ಲಿನ ಕಳಪೆ ಫಾರ್ಮ್‍ನಿಂದಾಗಿ ಪೃಥ್ವಿ ಶಾ ತಂಡದಿಂದ ಹೊರನಡೆದಿದ್ದರು. 21ರ ಹರೆಯದ ಪೃಥ್ವಿ ಶಾ ನೋವಿನಿಂದಲೇ ಹೊರಬಂದಿದ್ದರು. ಆದ್ರೆ ಶಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹೋಗಿದ್ದು ಸಚಿನ್ ತೆಂಡುಲ್ಕರ್ ಬಳಿ. ಸಚಿನ್ ನೀಡಿದ್ದ ಕೆಲವೊಂದು ಸಲಹೆ ಮಾರ್ಗದರ್ಶನಗಳನ್ನು ಪಡೆದುಕೊಂಡು ಕಣಕ್ಕಿಳಿದಿದ್ದು ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ.
ಪೃಥ್ವಿ ಶಾ ವಿಜಯ ಹಜಾರೆ ಟೂರ್ನಿಯಲ್ಲಿ ಆಡಿದ ರೀತಿಗೆ ಕ್ರಿಕೆಟ್ ಪಂಡಿತರು ಕೂಡ ಚಕಿತಗೊಂಡಿದ್ದರು. ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ರನ್ ಮಳೆಯನ್ನೇ ಸುರಿಸಿದ್ದರು. ಒಂದಲ್ಲ ನಾಲ್ಕು ಶತಕಗಳು. ಅದರಲ್ಲಿ ಒಂದು ದ್ವಿ ಶತಕ ಕೂಡ ಸೇರಿಕೊಂಡಿದೆ. ಅಷ್ಟೇ ಅಲ್ಲ, ವಿಜಯ ಹಜಾರೆ ಟೂರ್ನಿಯ ಒಂದು ಋತುವಿನಲ್ಲಿ 800ಕ್ಕಿಂತ ಅಧಿಕ ರನ್ ಕಲೆ ಹಾಕಿ ದಾಖಲೆಯನ್ನೇ ಬರೆದಿದ್ದಾರೆ. ಈ ಹಿಂದಿನ ಮಯಾಂಕ್ ಅಗರ್ ವಾಲ್ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದರು.
ಇದೀಗ ನಡೆಯುತ್ತಿರುವ ಫೈನಲ್ ಪಂದ್ಯದಲ್ಲೂ ಅಷ್ಟೇ. ಪೃಥ್ವಿ ಶಾ ಶತಕ ದಾಖಲಿಸಿಲಿಲ್ಲ. ಆದ್ರೆ ಪೆವಿಲಿಯನ್‍ಗೆ ಹಿಂತಿರುಗುವ ಮುನ್ನ ಪೃಥ್ವಿ ಶಾ ಉತ್ತರ ಪ್ರದೇಶ ಬೌಲರ್ ಗಳನ್ನು ಬೇವರಿಳಿಸಿದ್ದರು.
Vijay Hazare Trophy Final Prithvi Shaw c S Rizvi b Shivam Mavi 73run
ಫೈನಲ್ ಪಂದ್ಯದ ಆರಂಭದಲ್ಲೇ ಪೃಥ್ವಿ ಶಾ ಗಾಯಗೊಂಡಿದ್ದರು. ಮೊಣಕಾಲಿನ ಮುಂಭಾಗಕ್ಕೆ ಚೆಂಡು ತಾಗಿರುವುದರಿಂದ ಕೆಲ ಸಮಯ ಮೈದಾನದಿಂದ ಹೊರನಡೆದಿದ್ದರು.
ಆದ್ರೆ ನೋವು ಕಡಿಮೆಯಾಗುತ್ತಿದ್ದಂತೆ ಮತ್ತೆ ಮೈದಾನಕ್ಕೆ ಬಂದು ತಂಡವನ್ನು ಮುನ್ನೆಡೆಸಿದ್ದರು. ಆದ್ರೂ ಉತ್ತರ ಪ್ರದೇಶ ತಂಡ ಮಾಧವ್ ಸೊಲಂಕಿ ಅವರ ಅಹೇಯ 158 ರನ್ ಗಳ ಸಹಾಯದಿಂದ ಮುಂಬೈ ತಂಡಕ್ಕೆ ಗೆಲ್ಲಲು 313 ರನ್ ಗಳ ಸವಾಲನ್ನು ನೀಡಿತ್ತು.
ನೋವಿನ ನಡುವೆಯೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು ಪೃಥ್ವಿ ಶಾ. 39 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ರು. ಅಂತಿಮವಾಗಿ 73 ರನ್ ಗಳಿಸಿ ಪೃಥ್ವಿ ಶಾ ಪೆವಿಲಿಯನ್ ದಾರಿ ಹಿಡಿದ್ರು.
ಇದೀಗ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್, ಆದಿತ್ಯಾ ತಾರೆ ಆಸರೆಯಾಗಬೇಕಿದೆ. ರನ್ ಮೇಷಿನ್ ನಂತೆ ಆಟವಾಡಿದ್ದ ಪೃಥ್ವಿ ಶಾ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕು.
#Vijay Hazare Trophy Final #Prithvi Shaw #S Rizvi #Shivam Mavi #mumbai #uttarpradesh #saakshatv #cricket #bcci