ವಿಜಯ್ ಹಜಾರೆ ಟ್ರೋಫಿ | ಸೆಮಿಫೈನಲ್ ನಲ್ಲಿ ಎಡವಿದ ಕರ್ನಾಟಕ
ನವದೆಹಲಿ : ವಿಜಯ್ ಹಜಾರೆ ಟ್ರೋಫಿಯಲ್ಲಿ ಸೂಪರ್ ಸ್ಪೀಡ್ ನಲ್ಲಿ ಮುನ್ನುಗ್ಗುತ್ತಿದ್ದ ಕರ್ನಾಟಕ ಕ್ರಿಕೆಟ್ ತಂಡ ಸೆಮಿಫೈನಲ್ ನಲ್ಲಿ ಮುಂಬೈ ವಿರುದ್ಧ ಮುಗ್ಗರಿಸಿದೆ.
ಪಾಲಂನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಪೃಥ್ವಿ ಶಾ ಬೊಂಬಾಟ್ ಓಪನಿಂಗ್ ಕೊಟ್ಟರು.
122 ಎಸೆತಗಳನ್ನ ಎದುರಿಸಿದ ಮುಂಬೈ ನಾಯಕ ಪೃಥ್ವಿ ಶಾ 165 ರನ್ ಚಚ್ಚಿದರು.
ಇನ್ನುಳಿದಂತೆ ಜೈಸ್ವಾಲ್ 6, ಆದಿತ್ಯ ತಾರೆ 16, ಶಿವಂ ದುಬೆ 27, ಮುಲಾನಿ 45 ರನ್ ಗಳಿಸಿದರು. ಅಂತಿಮವಾಗಿ ಮುಂಬೈ ತಂಡ 49.2 ಓವರ್ಗಳಲ್ಲಿ 322 ರನ್ಗೆ ಆಲೌಟ್ ಆಯಿತು.
ಈ ಬೃಹತ್ ಮೊತ್ತದ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ.ಟೂರ್ನಿಯಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದ ಸಮರ್ಥ್ 8 ರನ್ ಗಳಿಗೆ ಔಟ್ ಆದ್ರು.
ದೇವದತ್ ಪಡಿಕಲ್ (64) ಸಿಡಿಸಿದರು. ಸಿದ್ಧಾರ್ಥ್ ಕೆವಿ 8, ಮನೀಷ್ ಪಾಂಡೆ 1, ಕರುಣ್ ನಾಯರ್ 29, ಶ್ರೇಯಸ್ ಗೋಪಾಲ್ 33, ಬಿಆರ್ ಶರತ್ 61, ಕೆ. ಗೌತಮ್ 28 ರನ್ ಗಳಿಸಿದ್ರು.
ಅಂತಿಮವಾಗಿ ಕರ್ನಾಟಕ ತಂಡ 42.4 ಓವರ್ಗಳಲ್ಲಿ 250 ರನ್ಗೆ ಆಲೌಟ್ ಆಗಿ 72 ರನ್ಗಳಿಂದ ಸೋಲೊಪ್ಪಿಕೊಂಡಿತು.