Vijay Hazare : 5 ಪಂದ್ಯದಲ್ಲಿ 4 ಶತಕ ಸಿಡಿಸಿದ ಋತುರಾಜ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ 2022ರ ವಿಜಯ್ ಹಜಾ಼ರೆ ಟ್ರೋಫಿ ಪಂದ್ಯಾವಳಿಯಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಋತುರಾಜ್, ಈ ಬಾರಿಯ ವಿಜಯ್ ಹಜಾ಼ರೆ ಟ್ರೋಫಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ.
ಟೂರ್ನಿಯ ಫೈನಲ್ ಪಂದ್ಯವನ್ನ ಗೆದ್ದು ಮಹಾರಾಷ್ಟ್ರ ತಂಡಕ್ಕೆ ಪ್ರಶಸ್ತಿ ತಂದುಕೊಡಬೇಕೆಂಬ ಕನಸು ಕೈಗೂಡದಿದ್ದರೂ, ಋತುರಾಜ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.
ಟೂರ್ನಿಯ ಆರಂಭದಿಂದಲೂ ಬ್ಯಾಟಿಂಗ್‌ನಿಂದ ಮಿಂಚಿದ್ದ ಗಾಯಕ್ವಾಡ್, ಫೈನಲ್‌ನಲ್ಲೂ ಶತಕ ಬಾರಿಸಿ ಅಬ್ಬರಿಸಿದರು.
ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕನಾಗಿದ್ದ ಗಾಯಕ್ವಾಡ್, ಜವಾಬ್ದಾರಿ ಬ್ಯಾಟಿಂಗ್‌ನಿಂದ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ.
ಅದರಲ್ಲೂ ಫೈನಲ್ ಸೇರಿದಂತೆ ಕೊನೆಯ ಐದು ಪಂದ್ಯಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಾಯಕ್ವಾಡ್, ನಾಲ್ಕು ಶತಕ, ಒಂದು ದ್ವಿಶತಕದ ಮೂಲಕ 660 ರನ್‌ಗಳಿಸಿದರು.
ಸ್ಪೋಟಕ ಬ್ಯಾಟಿಂಗ್‌ನಿಂದ ಮಿಂಚಿದ್ದ ಋತುರಾಜ್, ಪ್ರಸಕ್ತ ವರ್ಷದ ವಿಜಯ್ ಹಜಾ಼ರೆ ಟ್ರೋಫಿ ಪಂದ್ಯಾವಳಿಯಲ್ಲಿ 220.00 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.
ಪಂದ್ಯಾವಳಿಯ ಆರಂಭದಿಂದ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ ಋತುರಾಜ್, ನಿರೀಕ್ಷೆಯಂತೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್ ಮಾಡಿದ ತಮಗೆ ಇಂಥದ್ದೊಂದು ಪ್ರದರ್ಶನ ನೀಡಬೇಕಾದ ಅಗತ್ಯವಿತ್ತು.
ತಂಡದ ನಾಯಕನಾಗಿ ಮತ್ತು ಅನುಭವಿ ಆಟಗಾರನಾಗಿ ಈ ರೀತಿಯ ಪ್ರದರ್ಶನ ನೀಡಬೇಕಿತ್ತು ಎಂದಿದ್ದಾರೆ.