ವಿಜಯ್ ಹಜಾರೆ ಟ್ರೋಫಿ ಫೈನಲ್ – ಕಣಕ್ಕಿಳಿದ ಪೃಥ್ವಿ ಶಾ – ಮುಂಬೈಗೆ ಗೆಲ್ಲಲು 313 ರನ್ ಗಳ ಗುರಿ..!
Vijay Hazare Trophy -Uttar Pradesh vs Mumbai, Final
ದೆಹಲಿಯಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಉತ್ತರ ಪ್ರದೇಶ ತಂಡ ಗೆಲ್ಲಲು 313 ರನ್ ಗಳ ಸವಾಲು ಒಡ್ಡಿದೆ.
ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ನಿಗದಿತ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 312 ರನ್ ಗಳಿಸಿದೆ.
ಉತ್ತರ ಪ್ರದೇಶ ತಂಡದ ಪರ ಆರಂಭಿಕ ಮಾಧವ್ ಕೌಶಿಕ್ ಅವರು ಅಜೇಯ ಶತಕ ದಾಖಲಿಸಿ ಮಿಂಚು ಹರಿಸಿದ್ರು. ಮಾಧವ್ ಕೌಶಿಕ್ ಅವರು 156 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಮನಮೋಹಕ 158 ರನ್ ದಾಖಲಿಸಿದ್ರು.
ಇನ್ನುಳಿದಂತೆ ಮತ್ತೊಬ್ಬ ಆರಂಭಿಕ ಸಮರ್ಥ್ ಸಿಂಗ್ 55 ರನ್ ಗಳಿಸಿದ್ರೆ, ಪ್ರಿಯಮ್ ಗರ್ಗ್ 21 ರನ್, ಹಾಗೂ ಆಕಾಶ್ ದೀಪ್ ನಾಥ್ 55 ರನ್ ಮತ್ತು ಉಪೇಂದ್ರ ಯಾದವ್ ಅಜೇಯ 9 ರನ್ ಗಳಿಸಿದ್ರು. ನಾಯಕ ಕರಣ್ ಶರ್ಮಾ ಶೂನ್ಯ ಸುತ್ತಿದ್ರು. ಮುಂಬೈ ತಂಡದ ಪರ ತನುಷ್ ಕೋಟ್ಯಾನ್ ಎರಡು ವಿಕೆಟ್ ಹಾಗೂ ಪ್ರಶಾಂತ್ ಸೋಲಂಕಿ ಒಂದು ವಿಕೆಟ್ ಪಡೆದ್ರು.
Vijay Hazare Trophy -Uttar Pradesh vs Mumbai, Final
ಗಾಯಗೊಂಡ ಪೃಥ್ವಿ ಶಾ ಮತ್ತೆ ಕಣಕ್ಕೆ
ಇದೇ ವೇಳೆ ಪಂದ್ಯದ 24ನೇ ಓವರ್ ನಲ್ಲಿ ಮುಂಬೈ ತಂಡದ ನಾಯಕ ಪೃಥ್ವಿ ಶಾ ಅವರು ಮೊಣಕಾಲಿನ ಮುಂಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು. ನೋವನ್ನು ತಡೆಯಲು ಅಸಾಧ್ಯವಾಗಿ ಅವರು ಪೆವಿಲಿಯನ್ ಕೂಡ ಸೇರಿಕೊಂಡಿದ್ದರು. ಆದ್ರೆ ಪೃಥ್ವಿ ಶಾ ಪಂದ್ಯದಿಂದ ಹೊರಗಿರುವ ಮನಸ್ಸು ಮಾಡಲಿಲ್ಲ. ನೋವು ಕಡಿಮೆಯಾಗುತ್ತಿದ್ದಂತೆ
ಮತ್ತೆ ಮೈದಾನಕ್ಕೆ ಬಂದ ಪೃಥ್ವಿ ಶಾ ಅವರು ಆಕಾಶ್ ದೀಪ್ ಅವರನ್ನು ರನೌಟ್ ಮಾಡುವಲ್ಲಿ ಕೂಡ ಸಫಲರಾಗಿದ್ದರು.
ನೋವನ್ನು ಸಹಿಸಿಕೊಂಡು ಮುಂಬೈ ತಂಡದ ಇನಿಂಗ್ಸ್ ಆರಂಭಿಸಿರುವ ಪೃಥ್ವಿ ಸ್ಪೋಟಕ ಆಟವನ್ನಾಡಿದ್ದರು. ಈ ವರದಿ ಪ್ರಕಟವಾಗುತ್ತಿದ್ದಾಗ ಶಾ 22 ಎಸೆತಗಳಲ್ಲಿ 40 ರನ್ (7 ಬೌಂಡರಿ ಮತ್ತು 1 ಸಿಕ್ಸರ್ ಕೂಡ) ಬಾರಿಸಿದ್ದರು. ಸದ್ಯ ವಿಜಯ ಹಜಾರೆ ಟ್ರೋಫಿಯಲ್ಲಿ ದಾಖಲೆಯ ರನ್ ಕೂಡ ದಾಖಲಿಸಿದ್ದರು. ಈಗಾಗಲೇ ಅವರ ಹೆಸರಿನಲ್ಲಿ ನಾಲ್ಕು ಶತಕಗಳು ಸೇರಿಕೊಂಡಿವೆ. ಐದನೇ ಶತಕ ದಾಖಲಾಗುತ್ತಾ ಅನ್ನೋದನ್ನು ಕಾದು ನೋಡಬೇಕು.
#Vijay Hazare Trophy #Uttar Pradesh #Mumbai #saakshatv #kannadasports #kannadanews #sports #cricket #Prithvi Shaw








