Vijay Hazzare : ಕರ್ನಾಟಕ ಪ್ರೀ ಕ್ವಾರ್ಟರ್ ಪ್ರವೇಶ..!!
ರಾಜಸ್ತಾನ ವಿರುದ್ಧ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 48.4 ಓವರ್ಗಳಲ್ಲಿ 208 ರನ್ಗೆ ಆಲೌಟ್ ಆಯಿತು.ನಿಕಿನ್ ಜೋಸ್ 67, ಶ್ರೇಯಸ್ ಗೋಪಾಲ್ 57 ರನ್ ಗಳಿಸಿದರು. ಶರತ್ 24, ಮನೀಶ್ ಪಾಂಡೆ 21 ರನ್ ಹೊಡೆದರು. ರಾಜಸ್ತಾನ ಪರ ಅನಿಕೇತ್ ಮತ್ತು ಸಾಯಿಲ್ ತಲಾ 2 ವಿಕೆಟ್ ಪಡೆದರು.
ಮಾರಕ ದಾಳಿ ನಡೆಸಿದ ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು 41.1 ಓವರ್ಗಳಲ್ಲಿ
148 ರನ್ಗಳಿಗೆ ಆಲೌಟ್ ಮಾಡಿತು.ಯಶ್ ಕೊಠಾರಿ.49, ಕುನಾಲ್ ಸಿಂಗ್ 35 ರನ್ಗಳ ಹೋರಾಟ್ ವ್ಯರ್ಥವಾಯಿತು. ರೋನಿತ್ ಮತ್ತು ಗೌತಮ್ ತಲಾ 3 ವಿಕೆಟ್ ಪಡೆದರು.
ವಿಜಯ್ ಹಜಾರೆ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕರ್ನಾಟಕ ತಂಡ ಪ್ರೀಕ್ವಾರ್ಟರ್ ಫೈನಲ್ ಆಡಬೇಕಿದೆ. ಎಲೈಟ್ ಬಿ ಗುಂಪಿನಲ್ಲಿ ರಾಜಸ್ಥಾನ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ 60 ರನ್ಗಳ ಅಂತರದಿಂದ ಗೆಲುವು ಸಾಧಿಸಿತು.
ಇದರೊಂದಿಗೆ ಕರ್ನಾಟಕ ತಂಡ 24 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಅಷ್ಟೆ ಅಂಕಗಳೊಂದಿಗೆ ಅಸ್ಸಾಂ 2ನೇ ಸ್ಥಾನ ಪಡೆಯಿತು. ಕರ್ನಾಟಕ ತಂಡ ಅಸ್ಸಾಂ ವಿರುದ್ಧ ಸೋತಿದ್ದರಿಂದ ಅಸ್ಸಾಂ ನೇರವಾಗಿ ಕ್ವಾರ್ಟಗೆ ಹೋದರೆ ಕರ್ನಾಟಕ ತಂಟ ಪ್ರಿ ಕ್ವಾರ್ಟರ್ಗೇರಿದೆ.
ಪ್ರಿ ಕ್ವಾರ್ಟರ್ನಲ್ಲಿ ನ.26ರಂದು ಕರ್ನಾಟಕ ತಂಡ ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಉತ್ತರ ಪ್ರದೇಶ ಹಾಗೂ ಮುಂಬೈ, ಜಮ್ಮು ಕಾಶ್ಮೀರ ಹಾಗೂ ಕೇರಳ ತಂಡಗಳು ಸೆಣಸಲಿವೆ. ತಮಿಳುನಾಡು, ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಸೌರಾಷ್ಟ್ರ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.