ಸಿನಿ ಕಾರ್ಮಿಕರ ನೆರವಿಗೆ ಬಂದ ವಿಜಯ್ ಕಿರಗಂದೂರ್ : 32 ಲಕ್ಷ ರೂ.
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಮತ್ತೊಂದೆಡೆ ಲಾಕ್ ಡೌನ್ ನಿಂದಾಗಿ ಬಡವರು , ಸಿನಿಮಾ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.. ಅನೇಕರು ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಉಪೇಂದ್ರ , ಪುನೀತ್ ರಾಜ್ ಕುಮಾರ್ , ಯಶ್, ದರ್ಶನ್, ಕಿಚ್ಚ ಸುದೀಪ್ , ಶ್ರೀಮುರುಳಿ, ರಾಗಿಣಿ, ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ. ಇದೀಗ ಹೊಂಬಾಳೆ ಫಿಲಂಸ್ ಕೂಡ ಬಡವರ ಸಹಾಯಕ್ಕೆ ಸಹಾಯಕ್ಕೆ ನಿಂತಿದೆ.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಕನ್ನಡ ಸಿನಿ ಕಾರ್ಮಿಕರಿಗೆ 32 ಲಕ್ಷ ರೂ. ನೀಡಿದ್ದಾರೆ. ಕಾರ್ಮಿಕ ಒಕ್ಕೂಟದ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಹಾಯ ಆಗುವಂತೆ ಹಣ ನೀಡಿದ್ದಾರೆ. ಒಟ್ಟು 21 ವಿಭಾಗದ 3200 ಕಾರ್ಮಿಕರಿಗೆ ತಲಾ 1 ಸಾವಿರ ಸಿಗಲಿದೆ. ವಿಜಯ್ ಕಿರಗಂದೂರ್ ಕಾರ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಾಗೂ ಚಲನಚಿತ್ರ ಒಕ್ಕೂಟದ ಕಾರ್ಯದರ್ಶಿ ರವಿಂದ್ರನಾಥ್ ಧನ್ಯವಾದ ತಿಳಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








