Vijay Kirgandur : ಸಲಾರ್ ಚಿತ್ರದ ಕುರಿತು ಅಪ್ಡೇಟ್ ಕೊಟ್ಟ ನಿರ್ಮಾಪಕರು…
ಪ್ಯಾನ್ ಇಂಡಿಯಾ ನಟ ಪ್ರಭಾಸ್ ಸದ್ಯಕ್ಕೆ ಸಲಾರ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಲಾರ್ ಜೊತೆ ಜೊತೆಗೆ ಹಲವು ಪ್ರಾಜೆಕ್ಟ್ ಗಳಲ್ಲೂ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಅಭಿನಯದಲ್ಲಿ ಬಿಡುಗಡೆಯಾಗಿದ್ದ ಕಳೆದ ಚಿತ್ರಗಳು ಅಷ್ಟೊಂದು ಹೇಳಿಕೊಳ್ಳುವಂತಹ ಹಿಟ್ ಆಗಿರಲಿಲ್ಲ. ಹಾಗಾಗಿ ಇದೀಗ ಎಲ್ಲರ ಕಣ್ಣು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಸಲಾರ್ ಸಿನಿಮಾ ಮೇಲೆ ಬಿದ್ದಿದೆ.
ಸಲಾರ್ ಸಿನಿಮಾವನ್ನ ಹೊಂಬಾಳೆ ಫಿಲಂಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಇತ್ತೀಚೆಗಷ್ಟೇ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರದ ಕುರಿತಾಗಿ ಹೊಸ ಅಪ್ ಡೇಟ್ ಗಳನ್ನ ಕೊಟ್ಟಿದ್ದಾರೆ.
ಸಾಲಾರ್ ಸಿನಿಮಾದ ಶೇ.85ಕ್ಕೂ ಹೆಚ್ಚು ಚಿತ್ರೀಕರಣ ಮುಗಿದಿದೆ ಎಂದು ವಿಜಯ್ ಕಿರಂಗದೂರ್ ಹೇಳಿದ್ದಾರೆ. ಉಳಿದ ಭಾಗ ಜನವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದರು. ಸಲಾರ್ ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೈನರ್ ಆಗಲಿದೆ. ನಾನು ಕೆಲವೊಂದು ತುಣುಕುಗಳನ್ನ ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅದ್ಭುತವಾಗಿ ನಟಿಸಿದ್ದಾರೆ. ಜನವರಿ ವೇಳೆಗೆ ಸಿನಿಮಾ ಮುಗಿಸುತ್ತೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಆರು ತಿಂಗಳು ಮೀಸಲಿಟ್ಟಿದ್ದೇವೆ. ವಿಶುವಲ್ ಎಫೆಕ್ಟ್ ಮುಗಿಸಿ ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
Vijay Kirgandur: The producer gave an update on the film Salaar…








