Vijay Sankeshwar ಅವರಿಗೆ ಯಶಸ್ಸಿನ ಹಸಿವಿದೆ – ಸಿಎಂ ಬೊಮ್ಮಾಯಿ
ಪತ್ರಕರ್ತರು , ಯಶಸ್ವಿ ಉದ್ಯಮಿಗಳೂ ಆಗಿರುವ ವಿಜಯ್ ಸಂಕೇಶ್ವರ್ ರ ವಿ ಆರ್ ಆಲ್ ಟ್ರಾನ್ಸ್ ಪೋರ್ಟೇಷನ್ ಕೂಡ ಬಹಳ ಯಶಸ್ವಿ..
ಆದ್ರೆ ವಿಜಯ್ ಸಂಕೇಶ್ವರ್ ಅವರ ಜೀವನ ಸಾಕಷ್ಟು ಏರಿಳಿತಳಿಂದ ಕೂಡಿದೆ.. ಇವರ ಜೀವನವನ್ನೇ ಸಿನಿಮಾ ಮೂಲಕ ತೆರೆ ಮೇಲೆ ತರುವ ತಯಾರಿ ನಡೆಯುತ್ತಿದೆ..
ಈ ಸಾಧನೆಯ ಕಥೆಯ ಸಿನಿಮಾ ಟೈಟಲ್ಲೇ ವಿಜಯಾನಂದ..
ಶನಿವಾರ ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ..
ಜೊತೆಗೆ ವಿಜಯ್ ಸಂಕೇಶ್ವರ್ ಅವರ ಬಗ್ಗೆಯೂಮಾತನಾಡಿದ್ದಾರೆ..
ವಿಜಯ್ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ. ಹೊಸತು ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅನ್ನುತ್ತೋ, ಯಾವುದು ಮಾಡಬೇಡ ಅನ್ನುತ್ತೋ, ಅದನ್ನೇ ಮಾಡುತ್ತಾರೆ ಎಂದಿದ್ದಾರೆ..
ಸಿನಿಮಾ ಡಿಸೆಂಬರ್ 9 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾ 1400 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಲ್ಲದೆ ವಿದೇಶದ ಸುಮಾರು 200 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ವಿಜಯಾನಂದ ಬಯೋಪಿಕ್ ಅನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಇದು ಕನ್ನಡದ ಮೊದಲ ಬಯೋಪಿಕ್ ಸಿನಿಮಾವಾಗಿದೆ..
ಈ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ. ಈ ಬಯೋಪಿಕ್ ಅನ್ನು ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ್ದು ಮತ್ತಷ್ಟು ವಿಶೇಷ.
ಅಂದ್ಹಾಗೆ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ನಟಿಸಿದ್ದಾರೆ. ಇವರೊಂದಿಗೆ ಅನಂತ್‌ನಾಗ್,ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.