vijay sethupathi
ರಾಜೀವ್ ಗಾಂಧಿ ಹತ್ಯೆ ಪ್ರಕರಣ : ಅಪರಾಧಿಯ ಬಿಡುಗಡೆಗೆ ವಿಜಯ್ ಸೇತುಪತಿ ಮನವಿ
ಕಾಲಿವುಡ್ ನ ಖ್ಯಾತ ನಟ ವಿಜಯ್ ಸೇತುಪತಿ ಅವರು ನಟನೆಗಿಂತ ಹೆಚ್ಚಾಗಿ ಹಲವು ವಿಚಾರಗಳಲ್ಲಿ ಆಗಾಗ ಭಾರೀ ಚರ್ಚೆಯಲ್ಲಿರುತ್ತಾರೆ. ಇದೀಗ ಅವರು ನೀಡಿರುವ ಹೇಳಿಕೆ ಭಾರೀ ಸದ್ದು ಮಾಡ್ತಿದೆ. ಹೌದು ವಿವಾದಾತ್ಮಕ ವಿಷಯ ಒಂದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.
ಅಂದ್ಹಾಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳಲ್ಲಿ ಒಬ್ಬನಾದ ಪೆರರಿವಾಳನ್ ನನ್ನ ಶೀಘ್ರವೇ ಜೈಲಿನಿಂದ ರಿಲೀಸ್ ಮಾಡಬೇಕು ಎಂದು ಟ್ವಿಟ್ಟರ್ನಲ್ಲಿ ವಿಡಿಯೋ ಪ್ರಕಟಿಸಿ ಮನವಿ ಮಾಡಿಕೊಂಡಿದ್ದಾರೆ.
ಹೌದು ‘ ಪೆರರಿವಾಳನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪೆರರಿವಾಳನ್ ಪೆರೋಲ್ ಮೇಲೆ ಹೊರಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೆರರಿವಾಳನ್ ತಂದೆಯ ಆರೋಗ್ಯವೂ ತೀವ್ರವಾಗಿ ಕ್ಷೀಣಿಸಿದೆ. ಅವರ ತಾಯಿ ತಮ್ಮ ಇಡೀ ಜೀವನ, ಮಗನನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನದಲ್ಲಿಯೇ ಕಳೆದಿದ್ದಾರೆ’. ಹೀಗಾಗಿ ಅವರನ್ನ ಬಿಡುಗಡೆ ಮಾಡಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಖ್ಯಾತ ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ಎನ್ ಸಿಬಿ ದಾಳಿ
1991 ರ ಮೇ 21 ರಂದು ರಾಜೀವ್ ಗಾಂಧಿ ಅವರ ಮೇಲೆ ತಮಿಳುನಾಡಿನ ತಿರುಪೆರಂಬದೂರ್ ನಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆಸಿ ಅವರನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪೆರರಿವಾಳನ್, ಟಿ.ರಾಜರತ್ನಂ, ನಳಿನಿ, ಸುತೇಂದ್ರರಾಜ, ವಿ.ಶ್ರೀಹರನ್ ಅನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ಪ್ರಕಟಿಸಲಾಗಿತ್ತು. ಅಲ್ಲದೇ ಪ್ರಕರಣ ಸಂಬಂಧ ಪೆರರಿವಾಳನ್ ಗೆ ಮರಣದಂಡನೆ ವಿಧಿಸಲಾಗಿತ್ತು. ಬಳಿಕ 2014 ರಲ್ಲಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಲಾಗಿತ್ತು. ರಾಜೀವ್ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಸ್ಪೋಟಕಕ್ಕೆ ಬ್ಯಾಟೆರಿಗಳನ್ನು ತಯಾರಿಸಿಕೊಟ್ಟ ಕಾರಣಕ್ಕೆ ಪೆರರಿವಾಳನ್ ನನ್ನು ಬಂಧಿಸಲಾಗಿತ್ತು.
vijay sethupathi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel