ಕನ್ನಡವಳೆಂದು ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ – ಕನ್ನಡಿಗರ ಮೇಲೆ ಸಂಘಟನೆ ಕಟ್ಟಿಕೊಂಡು ದಬ್ಬಾಳಿಕೆ ನಡೆಸಲಾಗ್ತಿದೆ – ವಿಜಯಲಕ್ಷ್ಮಿ
ಬೆಂಗಳೂರು: ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ… ನಾನು ಕನ್ನಡದವಳೆಂದು ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ ಎಂದು ಬಹುಭಾಷಾ ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ವೀಡಿಯೋ ಮಾಡಿ ಮಾತನಾಡಿರುವ ವಿಜಯಲಕ್ಷ್ಮಿ, ಕೊರೊನಾ ಸಂದರ್ಭದಲ್ಲಿ ಅಕ್ಕ ಉಷಾ ಅವರ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ. ಅವರಿಗೆ ಚಿಕಿತ್ಸೆ ಕೊಡಿಸಲು ನನ್ನಿಂದ ಆಗುತ್ತಿಲ್ಲ. ಯಾವುದೇ ನಟರು ಸಹ ಸಹಾಯಕ್ಕೆ ಬರುತ್ತಿಲ್ಲ. ಇದಕ್ಕೆಲ್ಲ ಕಾರಣ ಶೀಮಾನ್, ಈತ ಸಂಘಟನೆ ಕಟ್ಟಿಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಕನ್ನಡಿಗರಿಗೆ ಅವಹೇಳನ ಮಾಡುತ್ತಿದ್ದಾನೆ. ನಾನು ಸಹ ಕನ್ನಡದವಳು ಎನ್ನುವ ಕಾಣಕ್ಕೆ ತಮಿಳುನಾಡಿನಲ್ಲಿ ಯಾರೂ ಸಹಾಯಕ್ಕೆ ಬರುತ್ತಿಲ್ಲ. ಅಕ್ಕ ಉಷಾಗೆ ಚಿಕಿತ್ಸೆ ಕೊಡಿಸಲು ಯಾವ ತಮಿಳು ನಟರು ಸಹ ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ.
ಅಲ್ಲದೇ ರಜಿಕಾಂತ್ ಅವರು ಹೊಸ ಪಕ್ಷ ಕಟ್ಟಲು ಮುಂದಾದಾಗ ಸಹ ಇವರು ಕನ್ನಡದವರು ಎಂದು ಹೇಳಿ ಟೀಕಿಸಿ, ರಾಜಕೀಯ ಪ್ರವೇಶಿಸುವುದನ್ನು ಶಿಮಾನ್ ತಡೆದ. ಹೀಗೆ ಕನ್ನಡಿಗರಿಗೆ ಹಿಂಸೆ ನೀಡುತ್ತಿದ್ದಾನೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೋರಾಟಗಾರರು ಈ ರೀತಿ ಮಾಡುತ್ತಿಲ್ಲ, ಉದಾರಿಗಳಾಗಿದ್ದಾರೆ. ಆದರೆ ಇಲ್ಲಿ ರಜನಿಕಾಂತ್ ಇತ್ತೀಚೆಗೆ ತಮಿಳುನಾಡು ಸಿಎಂ ಫಂಡ್ಗೆ 1.5 ಕೋಟಿ ರೂ. ನೀಡಿದರೂ ಕೇವಲ ಒಂದೂವರೆ ಕೋಟಿ ಕೊಟ್ಟಿದಿರಾ ಎಂದು ಟೀಕಿಸಿದರು. ನಾನೂ ಸಹ 2 ವರ್ಷ ಅವನಿಂದ ಜೊತೆ ಚಿತ್ರಹಿಂಸೆ ಅನುಭವಿಸಿದ್ದೇನೆ, ಕನ್ನಡದವಳು ಎಂದು ತಿರಸ್ಕರಿಸುತ್ತಿದ್ದ ಎಂದು ಕಿಡಿಕಾರಿದ್ದಾರೆ.
ಫಸ್ಟ್ ಲುಕ್ ರಿಲೀಸ್ನೊಂದಿಗೆ ಟಾಲಿವುಡ್ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪೇಮ ಕಾದಂಟʼ…
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.