vijayalakshmi darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ಒಲಿದುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಿಜಯಲಕ್ಷ್ಮಿ ‘ಮೈ ಫ್ರಶ್ ಬಾಸ್ಕೆಟ್’ ಎಂಬ ಹೊಸ ಆನ್ಲೈನ್ ಆಪ್ ಸ್ಥಾಪಿಸಿ ಉದ್ಯಮವೊಂದನ್ನ ಆರಂಭಿಸಿದ್ದರು.
ರೈತರಿಗೆ ನೆರವಾಗುವಂತೆ ವ್ಯಾಪಾರ ಆರಂಭಿಸಿದ್ದರು.
ಈ ಆಪ್ ಬಳಸಿ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು.
ಇನ್ನು ಗ್ರಾಹಕರಿಗೂ ಸಹ ನೇರವಾಗಿ ರೈತರಿಂದ ತರಕಾರಿ ಮತ್ತು ಹಣ್ಣುಗಳು ತಲುಪುತ್ತಿದ್ದವು.
ರೈತರ ಪರವಾಗಿ, ಅವರಿಗೆ ಸಹಾಯವಾಗುವಂತಹ ಉದ್ಯಮ ಪ್ರಾರಂಭಿಸಿದ್ದ ವಿಜಯಲಕ್ಷ್ಮಿ (vijayalakshmi darshan) ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೀಗ, ವಿಜಯಲಕ್ಷ್ಮಿ ಅವರ ಈ ಕೆಲಸಕ್ಕೆ ‘ಟೈಮ್ಸ್ ಬಿಸಿನೆಸ್’ ಅವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂತಸವನ್ನು ಸ್ವತಃ ದರ್ಶನ್ ಪತ್ನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಯುವರತ್ನ’ ಚಿತ್ರೀಕರಣ ಮುಕ್ತಾಯ: ‘ಪವರ್ ಸ್ಟಾರ್’ ಎಂಟ್ರಿಗೆ ಅಭಿಮಾನಿಗಳು ರೆಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel