ಈ ವಿಡಿಯೋವನ್ನು ದಯವಿಟ್ಟು ಸುಮಲತಾ ಅವರಿಗೆ ತಲುಪಿಸಿ, ನನ್ನ ಅಕ್ಕನಿಗೆ ನ್ಯಾಯ ಕೊಡಿಸಿ : ವಿಜಯಲಕ್ಷ್ಮಿ
ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ಬಹುಭಾಷಾ ಕನ್ನಡದ ನಟಿ ವಿಜಯಲಕ್ಷ್ಮಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ಒಮ್ಮೆ ಆತ್ಮಹತ್ಯೆಯ ಹೈ ಡ್ರಾಮಾ , ಮತ್ತೊಮ್ಮೆ ಆರರ್ಥಿಕ ನೆರವಿಗೆ ಬೇಡಿಕೆ , ಮಗದೊಮ್ಮೆ ಕೆಲವರ ವಿರುದ್ಧ ಆರೋಪ , ಕಾಂಟ್ರವರ್ಸಿಗೆ ಬ್ರೇಕ್ ಹಾಕುವುದರಿಂದ ಹಿಡಿದು ಚಿಕ್ಕ ದೊಡ್ಡ ವಿಚಾರಗಳಿಗೂ , ವಿಡಿಯೋ ಮೂಲಕ ಹೇಳಿಕೆಗಳನ್ನ ಕೊಡುತ್ತಿರುವ ವಿಜಯಲಕ್ಷ್ಮಿ ಇದೀಗ ಮಂಡ್ಯ ಸಂಸದೆ ಸುಮಲತಾ ಕುರಿತಾಗಿ ಮಾತನಾಡಿದ್ದಾರೆ..
ಇದೀಗ ವಿಜಯಲಕ್ಷ್ಮಿ ಸಹೋದರಿ ಉಷಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೆಚ್ಚಿನ ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಲ್ಲದೇ ಉಷಾ ಅವರ ಪತಿ, ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜ್ ಬಾಬು ಅವರಿಂದ ವಿಚ್ಛೇದನ ಕೊಡಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜಯಪ್ರದಾ ಅವರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ, ಸಂಪರ್ಕ ಮಾಡಲು ಯಾರು ಬಿಡುತ್ತಿಲ್ಲ ಎನ್ನುತ್ತಿರುವ ನಟಿ ವಿಜಯಲಕ್ಷ್ಮಿ ಈಗ ಸುಮಲತಾ ಅಂಬರೀಶ್ ಬಳಿ ಸಹಾಯ ಕೇಳಿದ್ದಾರೆ. ವಿಡಿಯೋ ಮೂಲಕ ಮನವಿ ಮಾಡಿರುವ ವಿಜಯಲಕ್ಷ್ಮಿ ಈ ವಿಡಿಯೋ ದಯವಿಟ್ಟು ಸುಮಲತಾ ಅವರಿಗೆ ತಲುಪಿಸಿ ಎಂದಿದ್ದಾರೆ.
ಸಹೋದರಿ ಉಷಾ ಅವರಿಗೆ ನ್ಯಾಯ ಕೊಡಿಸಲು ಅವರಿಂದ ಸಾಧ್ಯವಿದೆ. ಅದೇ ನಂಬಿಕೆಯಲ್ಲಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಸಹೋದರಿ ಆರೋಗ್ಯ ಹದಗೆಡುತ್ತಿದೆ, ಪತಿಯಿಂದ ವಿಚ್ಛೇದನ ಕೊಡಿಸಿದರೆ ಚಿಕಿತ್ಸೆಗೆ ಹಣ ಸಿಗುತ್ತೆ ಎನ್ನುತ್ತಿದ್ದಾರೆ. ಉಷಾ ಅವರ ಆರೋಗ್ಯ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹಣಬೇಕು. 15 ವರ್ಷಗಳಿಂದ ಉಷಾ ಚೆನ್ನೈನಲ್ಲಿ ಇದ್ದಾರೆ. ವಿಚ್ಛೇದನಕ್ಕೆ ಇಲ್ಲೆ ಅರ್ಜಿ ಹಾಕಬೇಕು. ಇದಕ್ಕೆ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ : ಟಾಪ್ 10 ರಲ್ಲಿಲ್ಲ RRR ಗೆ ಸ್ಥಾನ..! ನಂ. 1 ನಲ್ಲಿರೋದು ಕನ್ನಡದ ‘ವಿಕ್ರಾಂತ್ ರೋಣ’.!
ಅಲ್ಲದೇ 15 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿರುವ ಮಹಿಳೆ, ಬಿಜೆಪಿಯಂತ ಮಹಾನ್ ಪಕ್ಷದಲ್ಲಿ ಇರುವ ಮಹಿಳೆ, ಮಹಿಳೆಯರಿಗೆ ಧ್ವನಿ ಕೊಡ್ತೀನಿ ಅಂತ ಹೇಳಿರುವ ಜಯಪ್ರದಾ, 15 ವರ್ಷಗಳಿಂದ ನಮ್ಮ ಈ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ, ಹಿಂಸೆ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ಕೇಳಿದ್ರೆ ಕರ್ನಾಟಕದವರು ಕನ್ನಡದ ಹಿರಿಯರ ಜೊತೆ ಮಾತನಾಡಿ ಎಂದು ಹೇಳುತ್ತಾರೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಚಿಕಿತ್ಸೆಗೆ ಹೆಚ್ಚಿನ ಹಣಬೇಕು, ನನ್ನ ಬಳಿ ಹಣವಿಲ್ಲ. ಸಹಾಯ ಕೇಳಿದರೆ ಹೀಯಾಳಿಸುತ್ತಾರೆ. ಕೆಲಸಕ್ಕೆ ಹೋಗು ಎನ್ನುತ್ತಿದ್ದಾರೆ. ಆದರೆ ಕೆಲಸಕ್ಕೆ ಹೋಗಲು ಆಗಲ್ಲ, ಸದಾ ಜೊತೆಯಲ್ಲಿದ್ದು ಅಕ್ಕನ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೇ ಮಗನ ನೋಡಲು ಬಿಡಲ್ಲ. 15 ವರ್ಷಗಳಾಗಿದೆ ಅಕ್ಕ ಮಗನ ನೋಡದೆ. ಕರ್ನಾಟಕದಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕಿದೆ. ಉಷಾ ಅವರಿಗೆ ಯಾಕೆ ಹೀಗೆ. ಜಯಪ್ರದಾ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಅಶ್ಲೀಲ ವಿಡಿಯೋ ನಿರ್ಮಾಣ : ನ್ಯಾಯಾಂಗ ಬಂಧನದಲ್ಲಿ ಕುಂದ್ರಾ – ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟಿ..!
ಇನ್ನೂ ಸುಮಲತಾ ಅಂಬರೀಶ್ ಅವರನ್ನು ಸಂಪರ್ಕ ಮಾಡಿ ಉಷಾ ಅವರ ಈ ಪರಿಸ್ಥಿತಿ ತಿಳಿಸಿ, ಜಯಪ್ರದಾ ಏನೆಲ್ಲ ಹಿಂಸೆ ಕೊಟ್ಟಿದ್ದಾರೆ ಎಲ್ಲಾ ತಿಳಿಸಬೇಕು. ಅಂಬರೀಶ್ ಅವರನ್ನು ಸಂಪರ್ಕ ಮಾಡಲು ನನ್ನ ಬಳಿ ಆಗಿಲ್ಲ. ಆದರೀಗ ಸುಮಲತಾ ಅಂಬರೀಶ್ ಅವರಿಗೆ ಈ ವಿಡಿಯೋ ತಲುಪಿಸಿ. ನಾನು ಸಂಪರ್ಕ ಮಾಡಲು ಪ್ರಯತ್ನ ಪಟ್ಟರೆ ಖಂಡಿತ ಯಾರು ಬಿಡಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ‘ಸುಮಲತಾ ಮೇಡಮ್, ಜಯಪ್ರದಾ ಬಳಿ ಮಾತನಾಡಿದ್ರೆ ಖಂಡಿತ ಆಗುತ್ತೆ. ಆ ನಂಬಿಕೆಯಲ್ಲಿ ಈ ವಿಡಿಯೋ ಮಾಡಿದ್ದೀನಿ’ ಎಂದು ವಿಜಯಲಕ್ಷ್ಮಿ ಹೊಸ ವಿಡಿಯೋ ಮೂಲಕ ಸುಮಲತಾ ಅಂಬರೀಶ್ ಬಳಿ ಮನವಿ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಟಾಪಿಕ್ ಆಗಿದ್ದಾರೆ.