31 ನೇ ಹೊಸ ಜಿಲ್ಲೆಯಾಗಿ ವಿಜಯನಗರ ಉದಯ, ಹೆಚ್ಚಿದ ಆಕ್ರೋಶ
ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಬಳ್ಳಾರಿ ತಾಲೂಕಿನ ಜೋಳದರಾಶಿ ಗ್ರಾಮದಲ್ಲಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ಕೆಲ ಕಾಲ ರಾ.ಹೆ. 63 ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹಿರೀಯ ಸಾಹಿತಿ ಗುತ್ತಿ ಚಂದ್ರಶೇಖರ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು, ಗ್ರಾಮದ ವಿವಿಧ ನಾಗರಿಕರು ಕೆಲ ಕಾಲ ರಸ್ತೆ ತಡೆ ನಡೆಸಿ ವಿವಿಧ ಘೋಷಣೆಗಳನ್ನು ಕೂಗಿದರು.
ರಸ್ತೆ ಮೇಲೆ ಕುಳಿತು ವಿವಿದ ಮುಖಂಡರು ಸಮಾವೇಶ ನಡೆಸಿದರು. ನಾನು 17 ಶಾಸಕರ ನಾಯಕನಲ್ಲ : ಮಿತ್ರಮಂಡಳಿಗೆ `ಸಾಹುಕಾರ್’ ಶಾಕ್
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕರೂರು ಆರ್.ಮಾಧವ ರೆಡ್ಡಿ ಮಾತನಾಡಿ, ಬಳ್ಳಾರಿ ವಿಭಜನೆ ಬೇಡ ಎನ್ನುವ ಕೂಗು ಬಲವಾಗಲ್ಲ.
ಸರ್ಕಾರ ನಮ್ಮ ಕೂಗನ್ನು ಆಲಿಸಲಿಲ್ಲ. ತುಂಗಭದ್ರ ಜಲಾಶಯದ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ನಾನಾ ಬೆಳೆಯನ್ನು ಬೆಳೆಯಲಾಗುತ್ತಿದೆ.
ರೈತರ ಕೂಗು ಆಲಿಸದೇ ಮಾನ ಮರ್ಯಾದೆ ಇಲ್ಲದೇ ಒಬ್ಬ ಶಾಸಕರ ಓಲೈಕೆಗಾಗಿ ಸರ್ಕಾರ ಜಿಲ್ಲೆ ವಿಭಜನೆಯನ್ನು ಮಾಡಿದೆ.
ಜಿಲ್ಲೆ ವಿಭಜನೆ ಖಂಡಿಸಿ ಜಿಲ್ಲೆಯ ಒಬ್ಬ ಶಾಸಕರು ರಾಜೀನಾಮೆ ನೀಡಲು ಮುಂದಾಗಲಿಲ್ಲ, ಇದು ಬಹು ದೊಡ್ಡ ದುರಂತ ಎಂದರು. ನಾವು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ಕೊಡಲ್ಲ : ಈಶ್ವರಪ್ಪ
ಜಿಲ್ಲೆ ವಿಭಜನೆ ಮಾಡಲು ಅವರಪ್ಪನ ಅಸ್ತಿಯಲ್ಲ, ನಾಯಕರಾದ ನಿಮಗೆ ನಾಚಿಕೆಯಾಗಬೇಕು. ಜಿಲ್ಲೆಯ, ಮೊಣಕಲ್ಮೂರು ಶಾಸಕ ಶ್ರೀರಾಮುಲು ಜಿಲ್ಲೆ ವಿಭಜನೆಯನ್ನು ಖಂಡಿಸಲಿಲ್ಲ.
ನಗರ ಶಾಸಕ ಸೋಮಶೇಖರ ರೆಡ್ಡಿ ಕೇವಲ ಹೇಳಿಕೆಗೆ ಅಷ್ಟೇ ಸೀಮಿತರಾದರು. ಪ್ರತ್ಯೇಕ ಜಿಲ್ಲೆ ಬೇಡ, ಬೇಕಿದ್ದರೆ ಬಳ್ಳಾರಿ ಬದಲು ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಿ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









