Vijayapura | ಮಗುವಿನ ಕಳ್ಳತನಕ್ಕೆ ಯತ್ನ – ಮಗುವನ್ನ ರಕ್ಷಿಸಿದ ತಾಯಿ
ವಿಜಯಪುರ : ವ್ಯಕ್ತಿಯೊಬ್ಬ ನಾಲ್ಕು ವರ್ಷದ ಗಂಡು ಮಗು ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿ ಕಳ್ಳನ ಬೆನ್ನಟ್ಟಿ ಮಗುವನ್ನ ರಕ್ಷಿಸಿರುವ ಘಟನೆ ವಿಜಯಪುರದ ಬಸವನ ನಗರದಲ್ಲಿ ನಡೆದಿದೆ.
ಅಂಗಡಿಗೆ ಬಂದಿದ್ದ ಆರೋಪಿ ಮಗುವನ್ನ ಎತ್ತಿಕೊಂಡು ಹೋಗಿದ್ದು, ಮಗುವಿನ ಅಳುವ ಧ್ವನಿ ಕೇಳಿ ತಾಯಿ ರೇಣುಕಾ ಓಡಿಬಂದು ಮಗುವನ್ನ ರಕ್ಷಿಸಿಕೊಂಡಿದ್ದಾರೆ.
ಕೂಡಲೇ ಸ್ಥಳೀಯರು ಆರೋಪಿಯನ್ನ ಥಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಹೆಸರು ಕೇಳಿದ್ರೆ ಹಲವು ಹೆಸರುಗಳನ್ನ ಹೇಳುತ್ತಿದ್ದಾನೆ.
ನಾನು ಮನೆಯಲ್ಲಿ ಮಗಳಿಗೆ ಔಷಧಿ ಕೊಡುತ್ತಿದ್ದೆ.
ಆಗ ಮಗ ಅಂಗಡಿಗೆ ಹೋಗಿದ್ದು, ಅಲ್ಲಿ ಕಳ್ಳ ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಆಗ ನನ್ನ ಮಗ ಕಿರುಚಾಡಿದ್ದು, ಆಗ ಅವನು ಬಾಯಿ ಒತ್ತಿ ಹಿಡಿದಿದ್ದಾನೆ.
ನನಗೆ ಮಗನ ಧ್ವನಿ ಕೇಳಿಸಿ ಏನೋ ಆಯ್ತು ಅಂತ ಹೊರಗಡೆ ಓಡಿ ಬಂದೆ.
ತಕ್ಷಣ ಓಡಿ ಹೋಗಿ ಮಗನನ್ನು ಉಳಿಸಿಕೊಂಡೆ ಎಂದು ತಾಯಿ ರೇಣುಕಾ ಘಟನೆ ಬಗ್ಗೆ ವಿವರಿಸಿದ್ದಾರೆ.