Vijayapura : ಮನೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ವೃದ್ದೆ ಮೇಲೆ ಅತ್ಯಾಚಾರ…
ಮನೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ 60 ವರ್ಷದೆ ವೃದ್ದೆಯನ್ನ ಇಬ್ಬರು ಯುವಕರು ಅತ್ಯಾಚಾರ ಎಸಗಿರುವ ಹೇಯ ಕೃತ್ಯ ವಿಜಯಪುರದಲ್ಲಿ ನೆಡದಿದೆ. ಘಟನೆ ಕುರಿತು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.
ನಗರದ ವಾಟರ್ ಟ್ಯಾಂಕ ಬಳಿ ಮನೆಗೆ ಹೋಗಲು ನಿಂತಿದ್ದ ವೃದ್ದೆಯ ಬಳಿ ಬಂದ ಇಬ್ಬರು ಚಾಲಕರು ಮನೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆದಿದ್ದಾರೆ. ವಿಜಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಮತ್ತು ಬಸವ ನಗರದ ನಿವಾರಿ ರವಿ ಈ ಕೃತ್ಯ ನಡೆಸಿದ ಪಾಪಿಗಳು.
ಫೆಬ್ರವರಿ 23 ರಂದು ರಾತ್ರಿ ಈ ಘಟನೆ ನಡೆದಿದೆ. ವೃದ್ದೆ ನರಳಾಡುವುದನ್ನ ನೋಡಿ ಸ್ಥಳಿಯರು ಪೊಲೀಸರಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ದೆಯನ್ನ ಜಿಲ್ಲಾ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ವೃದ್ದೆ ನೀಡಿದ ಮಾಹಿತಿ ಮತ್ತು ಮೊಬೈಲ್ ಟವರ್ ಲೊಕೆಷನ್ ಆಧರಿಸಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Vijayapura: An old woman sexually assaulted by auto drivers in bijapur city