ವಿಜಯಪುರದಲ್ಲಿ ಒಂದೇ ವಾರದಲ್ಲಿ 2ನೇ ಬಾರಿಗೆ ಕಂಪಿಸಿದ ಭೂಮಿ..!
ವಿಜಯಪುರ : ವಿಜಯಪುರದಲ್ಲಿ ಮತ್ತೆ ಭೂಕಂಪಿಸಿದ ಅನುಭವವಾಗಿದೆ. ಒಂದೇ ವಾರದಲ್ಲಿ 2ನೇ ಭಾರಿಗೆ ಬೂ ಕಂಪಿಸಿದ್ದು, ಜನರನ್ನ ಆತಂಕಕ್ಕೆ ದೂಡಿದೆ. ಕೀರ್ತಿನಗರ ಸೇರಿದಂತೆ ಇನ್ನೂ ಹಲವೆಡೆ ಭೂಕಂಪನದ ಅನುಭವವಾಗಿದೆ.
ಸರಿಸುಮಾರು (ಶನಿವಾರ) ಬೆಳಿಗ್ಗೆ 8.15 ರಿಂದ 8.20 ರವರೆಗೂ ಈ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಮಿ ಒಳಗಿನಿಂದ ಶಬ್ಧವೂ ಕೇಳಿಸಿದೆ ಎನ್ನಲಾಗಿದೆ..
ಒಂದೇ ವಾರದಲ್ಲಿಯೇ 2ನೇ ಬಾರಿಗೆ ಭೂಮಿ ಕಂಪಿಸಿರುವ ಕಾರಣ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನೂ ಭೂಕಂಪನದ ಅನುಭವವಾಗಿದೆ. ಆದ್ರೆ ಭೂಕಂಪನದ ಬಗ್ಗೆ ರಿಕ್ಟರ್ ಮಾಪನದಲ್ಲಿ ಮಾತ್ರ ದಾಖಲಾಗಿಲ್ಲ ಎಂದು ತಜ್ಞರು ಖಚಿತಪಡಿಸಿರೋದಾಗಿ ವರದಿಯಾಗಿದೆ.
ಅಂದ್ಹಾಗೆ ಈ ಹಿಂದೆ ಅಂದ್ರೆ ಸಪ್ಟೆಂಬರ್ 4 ರಂದು ರಾತ್ರಿ 11.47 ರಿಂದ 11.49ರ ನಡುವೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭೂಕಂಪನ ಸಂಭವಿಸಿತ್ತು.
ಆಗ ರಿಕ್ಟರ್ ಮಾಪನದಲ್ಲಿ 3.9 ತೀವ್ರತೆ ದಾಖಲಾಗಿತ್ತು. ಆದ್ರೆ ಈ ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ರೂ ರಿಕ್ಟರ್ ಮಾಪನದಲ್ಲಿ ಮಾತ್ರ ದಾಖಲಾಗಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ಭೂಮಿಯೊಳಗೆ ಶಿಲಾ ಪದರ ದುರ್ಬಲವಾಗಿರುವುದೇ ಭೂಕಂಪಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ ವಿಜ್ಞಾನಿಗಳು ವರದಿ ನೀಡಿದ್ದಾರೆ.