Vijayapura | ಅಕ್ರಮ ಶಿಕ್ಷಕರ ನೇಮಕ ಹಗರಣ – ಶಿಕ್ಷಕ ಸಿಓಡಿ ವಶಕ್ಕೆ
ವಿಜಯಪುರ : ಅಕ್ರಮ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ವಿಜಯಪುರ ಜಿಲ್ಲೆಯಲ್ಲಿ ಓರ್ವ ಶಿಕ್ಷಕನನ್ನ ಸಿಓಡಿ ವಶಕ್ಕೆ ಪಡೆದಿದೆ.
ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಶೋಕ ಚವ್ಹಾಣ ಬಂಧಿತನಾಗಿದ್ದಾನೆ.
2012ರಿಂದ 2014ರ ಅವಧಿಯಲ್ಲಿ ಅಕ್ರಮ ಶಿಕ್ಷಕನಾಗಿ ನೇಮಕವಾಗಿರುವ ಆರೋಪದಲ್ಲಿ ಬೆಂಗಳೂರು ಸಿಓಡಿ ಅಧಿಕಾರಿಗಳ ಸೂಚನೆ ಮೇರೆಗೆ ಕಲಬುರಗಿ ಸಿಓಡಿ ಅಧಿಕಾರಿಗಳಿಂದ ಶಿಕ್ಷಕ ಅಶೋಕ ಚವ್ಹಾಣ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಶೋಕ ಚವ್ಹಾಣ ಅವರನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ಅಶೋಕ್ ಚವ್ಹಾಣ ಮೊದಲು ಮೊದಲು ಚಿತ್ರದುರ್ಗ ಜಿಲ್ಲೆ ಜಗಳೂರಿನ ಪ್ರೌಢಶಾಲೆಗೆ ನೇಮಕವಾಗಿದ್ದರು.
ಇದಾದ ಬಳಿಕ ವಿಜಯಪುರ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು.
ಅಕ್ರಮ ಶಿಕ್ಷಕರ ನೇಮಕಾತಿ ಹಗರಣ ತನಿಖೆ ವೇಳೆ ವಿಜಯಪುರ ಜಿಲ್ಲೆಯ ಶಾಲೆಗಳಲ್ಲಿ ಸಿಓಡಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.