Vijayapura | ಕ್ವಾರಿಯಲ್ಲಿ ಸ್ನಾನ ಮಾಡಲು ಹೋಗಿ ವ್ಯಕ್ತಿ ಸಾವು
ವಿಜಯಪುರ : ಕಲ್ಲು ಗಣಿಗಾರಿಕಾ ಕ್ವಾರಿಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ವ್ಯಕ್ತಿ ಬಿದ್ದು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ನಡೆದಿದೆ.
50 ವರ್ಷದ ಕೊಲ್ಹಾರ ಪಟ್ಟಣದ ರಾವತ್ ದಳವಾಯಿ ಮೃತಪಟ್ಟಿರುವ ದುರ್ದೈವಿ.
ಕ್ವಾರಿಯಲ್ಲಿ ಸ್ನಾನ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.