vijayapura ರಾಜ್ಯದಲ್ಲಿ ದಲಿತ ಸಿಎಂ ಆಗಲೇ ಬೇಕು : ರಮೇಶ್ ಜಿಗಜಿಣಗಿ
ವಿಜಯಪುರ : ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಲೇ ಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ರಾಜ್ಯದಲ್ಲಿ ಒಬ್ಬ ಶೇ.2-3ರಷ್ಟು ಇರೋರು ಸಿಎಂ ಆಗಿದ್ದಾರೆ.
ಶೇ.23ರಷ್ಟು ಇರೋ ದಲಿತರು ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದರು.
ಅಲ್ಲದೆ ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು. ಆಗಂತ ನಾನೇ ಸಿಎಂ ಆಗಬೇಕೆಂದೇನಿಲ್ಲ.
ಆದ್ರೆ ಯಾರಾದರೂ ಒಬ್ಬರು ದಲಿತ ಸಿಎಂ ಆಗಲೇಬೇಕು. ದಲಿತರು ಸಿಎಂ ಆಗಬೇಕು ಅನ್ನೋ ಆಸೆ ನನ್ನದು.
ಒಂದಿಲ್ಲ ಒಂದು ದಿನ ದೇವರೇ ದಲಿತರನ್ನ ಸಿಎಂ ಮಾಡ್ತಾನೆ. ನೀವೆಲ್ಲ ಬೇಡ ಅಂದರೂ ದೇವರೇ ದಲಿತರನ್ನ ಸಿಎಂ ಮಾಡ್ತಾನೆ ಅಂತ ಸಂಸರು ವಿಶ್ವಾಸ ವ್ಯಕ್ತಪಡಿಸಿದರು.