ವಿಜಯಪುರ Vijayapura ಪುರಸಭಾ ಚುನಾವಣೆ ; ಜೆಡಿಎಸ್ ಗೆ ಅಧಿಕಾರ
ವಿಜಯಪುರ : 8 ವರ್ಷಗಳ ಬಳಿಕ ವಿಜಯಪುರ ಪುರಸಭಾ ಚುನಾವಣೆ ನಡೆದಿದ್ದು, ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ 13 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪುರಸಭೆಯ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
2013 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳಲ್ಲಿ, ಜೆಡಿಎಸ್ 02, ಪಕ್ಷೇತರ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಕಾಂಗ್ರೆಸ್ ಗೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ಅಧಿಕಾರವನ್ನು ಪೂರ್ಣ ಅವಧಿಗೆ ನಡೆಸಲು ವಿಫಲವಾಗಿ, ಮೀಸಲಾತಿ ವಿಚಾರದಲ್ಲಿ ಪದೇ ಪದೇ ನ್ಯಾಯಾಲಯಕ್ಕೆ ಹೋಗಿದ್ದರಿಂದ ಅವಧಿ ಮುಗಿದರೂ ಚುನಾವಣೆ ನಡೆದಿರಲಿಲ್ಲ.
ಈ ಬಾರಿ ಚುನಾವಣೆ ನಡೆದಿದ್ದು, ಜೆಡಿಎಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಲ್ಲಿದ್ದ ಒಳಜಗಳ ಜೆಡಿಎಸ್ ಗೆ ವರದಾನವಾಗಿದೆ.










