ದೆಹಲಿಯಲ್ಲಿ ವಿಜಯಪುರದ ಯೋಧ ಆತ್ಮಹತ್ಯೆಗೆ ಶರಣು
ವಿಜಯಪುರ : ದೆಹಲಿಯ ತನ್ನ ನಿವಾಸದಲ್ಲಿ ವಿಜಯಪುರ ಮೂಲದ ಯೋಧ ನೇಣಿಗೆ ಶರಣಾಗಿದ್ದಾರೆ.
ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಪರಸಪ್ಪ ಬಸಪ್ಪ ಚಿಲಕನಹಳ್ಳಿ ಮೃತ ಯೋಧನಾಗಿದ್ದಾನೆ.
ಪರಸಪ್ಪ ಬಸಪ್ಪ ಚಿಲಕನಹಳ್ಳಿ, ಮದ್ರಾಸ್ ರೆಜಿಮೆಂಟ್ 27 ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಯೋಧ ಕಳೆದೆರಡು ವರ್ಷಗಳ ಹಿಂದೆ ಜಯಶ್ರೀ ಎಂಬುವರನ್ನು ವಿವಾಹವಾಗಿದ್ದರಂತೆ.
ಐದು ತಿಂಗಳ ಹಿಂದೆಯಷ್ಟೆ ಗ್ರಾಮದಿಂದ ತನ್ನ ಪತ್ನಿಯನ್ನು ಕರೆದುಕೊಂಡು ದೆಹಲಿಗೆ ಹೋಗಿ ಮಥುರಾ ಕ್ಯಾಂಪ್‍ನಲ್ಲಿ ವಾಸವಿದ್ದರು.
ಆದ್ರೆ ನಿನ್ನೆ ರಾತ್ರಿ ಪರಸಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ಪರಸಪ್ಪ ಬಸಪ್ಪ ಅವವ ಮೃತದೇಹ ನಾಳೆ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ.
