ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಬಣ ಬಡಿದಾಟ ತೀವ್ರಗೊಂಡಿರುವ ಹೊತ್ತಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗ (JP Nadda) ಕೂಡ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ವಿಜಯೇಂದ್ರ (BY Vijayendra) ರೆಬೆಲ್ಸ್ ವಿರುದ್ಧ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕ ಹೋರಾಟಕ್ಕೆ ಬ್ರೇಕ್ ಹಾಕಿಸಿ ಸಹಕಾರ ನೀಡುವಂತೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ಎಲ್ಲಾ ಸರಿ ಹೋಗಲಿದೆ. ನಾನು ಸಹ ಅವರನ್ನ ಕರೆದು ಮಾತನಾಡುವೆ. ಸದ್ಯದಲ್ಲಿ ಎಲ್ಲದಕ್ಕೂ ಅಂತ್ಯ ಹಾಡಲಾಗುತ್ತೆ ಎಂದು ನಡ್ಡಾ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಶೀಘ್ರವೇ ನಡೆಯಲಿರುವ ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆಯೂ ನಡ್ಡಾ-ವಿಜಯೇಂದ್ರ ಚರ್ಚೆ ನಡೆಸಿದ್ದಾರೆ. ಸಿ ಟಿ ರವಿ (CT Ravi), ಮುನಿರತ್ನ (Munirthana) ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ಹಮ್ಮಿಕೊಂಡಿರುವ ಹೋರಾಟಗಳ ಬಗ್ಗೆ ವಿಜಯೇಂದ್ರ ವಿವರಿಸಿದ್ದಾರೆ. ಮುನಿರತ್ನ ಸೇರಿದಂತೆ ಹಲವರು ಕೂಡ ನಡ್ಡಾ ಅವರನ್ನು ಭೇಟಿ ನೀಡಿದ್ದಾರೆ ಎನ್ನಲಾಗಿದೆ.








