ಪಕ್ಷದಲ್ಲಿ ವಿಜಯೇಂದ್ರರನ್ನು ವೈಭವೀಕರಿಸಲಾಗುತ್ತಿದೆ : ಈಶ್ವರಪ್ಪ
ಶಿವಮೊಗ್ಗ : ರಾಜ್ಯ ಬಿಜೆಪಿಯಲ್ಲಿ ಎಲ್ಲ ಸರಿಯಿಲ್ಲ ಎಂದು ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಸರ್ಕಾರದಲ್ಲಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೆಲ ಬಿಜೆಪಿ ಶಾಸಕರು ಆರೋಪಿಸುತ್ತಿದ್ದಾರೆ.
ಇನ್ನೊಂದೆಡೆ ಸಿಎಂ ಬದಲಾವಣೆಗೆ ಬಗ್ಗೆಯೂ ಪಕ್ಷದಲ್ಲಿ ಮಾತುಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಪಕ್ಷದಲ್ಲಿ ಕೆಲವರು ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಅಖಂಡ ನನ್ನ ಬಳಿ ಮಾತಾಡಿಲ್ಲ : ಡಿಕೆಶಿ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ.
ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲವು ಸಾಧಿಸುತ್ತಿದ್ದೇವೆ. ಆದರೆ ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಚುನಾವಣೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರಕ್ಕೂ ನಾಲ್ಕರಿಂದ ಐದು ಜನರನ್ನು ಉಸ್ತುವಾರಿಯಾಗಿ ನಮ್ಮ ನಾಯಕರು ನೇಮಿಸುತ್ತಾರೆ.
ಅದೇ ಮಾದರಿಯಲ್ಲಿ ಶಿರಾ ಹಾಗೂ ಆರ್ ಆರ್ ನಗರಕ್ಕೂ ಉಸ್ತುವಾರಿ ನೇಮಿಸಲಾಗಿತ್ತು. ಶಿರಾದಲ್ಲಿ ಕೆಲಸ ಮಾಡಿದಂತೆ, ಆರ್ ಆರ್ ನಗರದಲ್ಲಿ ಸಚಿವ ಆಶೋಕ್ ಅವರು ಕೆಲಸ ಮಾಡಿದ್ದಾರೆ.
ಡಿಎಂಕೆ ಜೊತೆಗಿನ ಮೈತ್ರಿ ಮುಂದುವರಿಯಲಿದೆ : ದಿನೇಶ್ ಗುಂಡೂರಾವ್
ಆದರೆ ಪಕ್ಷದಲ್ಲಿ ಬಿ.ವೈ ವಿಜಯೇಂದ್ರ ಅವರನ್ನು ವೈಭವೀಕರಿಸಲಾಗುತ್ತದೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










