ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಅವರು, ಮೋದಿ ಅವರು ಲಾಟರಿ ಮೂಲಕ ಮುಖ್ಯಮಂತ್ರಿಯಾಗಿಲ್ಲ, ಸಿಎಂ ಸಿದ್ದರಾಮಯ್ಯ ರೀತಿ ಅದೃಷ್ಟ ಲಾಟರಿ ಸಿಎಂ ಆಗಿರಲಿಲ್ಲ ಎಂದು ಹೇಳಿದರು.
ಮೋದಿ ಅವರು ತಮ್ಮನ್ನು ಒಬಿಸಿ ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿಲ್ಲ. ಅವರು ದೇಶದ ಜನರ ಸೇವೆಗೆ ತೊಡಗಿದವರು. ಆದರೆ ಈಗ ಕೆಲವು ನಾಯಕರು ತಮ್ಮ ಜಾತಿಯನ್ನು ಹೇಳಿಕೊಂಡು ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಅಲ್ಫಸಂಖ್ಯಾತರ ವಿರೋಧಿ ಎಂಬ ಟ್ಯಾಗ್ ಅನ್ನು ಬಿಜೆಪಿಗೆ ಅಂಟಿಸಲು ಕಾಂಗ್ರೆಸ್ ನೋಡುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುವುದು ತಪ್ಪು. ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯಾಗಿ ಮಾಡಿದವರು ಬಿಜೆಪಿ. ಕಾಂಗ್ರೆಸ್ ಅಲ್ಲ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಗ್ಗೆ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರಪತಿಯಾಗಿಸಲು ಕಾಂಗ್ರೆಸ್ ಮುಂದಾಗಬೇಕಿತ್ತು ಎಂಬ ಸವಾಲು ಎಸೆದರು.
ಕಾಂಗ್ರೆಸ್ ಬಳಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರಪತಿಯಾಗಿಸಲು ಸಹ ಶಕ್ತಿ ಇಲ್ಲ. ಇದು ಅವರ ರಾಜಕೀಯ ದೌರ್ಬಲ್ಯದ ಸೂಚನೆ ಎಂದು ವಿಜಯೇಂದ್ರ ಟೀಕಿಸಿದರು.








