ಇತ್ತೀಚೆಗಷ್ಟೇ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಗೂ ಮುನ್ನ ಪೊಲೀಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಉತ್ತರ ಪ್ರದೇಶದ ಪೊಲೀಸರ ಮಾಹಿತಿ ಪ್ರಕಾರ ವಿಕಾಸ್ ದುಬೆ ಪರಾರಿಯಾಗುವ ಯತ್ನದಲ್ಲಿ ಪೊಲಿಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ. ಅವುಗಳಲ್ಲಿ ೩ ಪೊಲೀಸ್ ಸಿಬ್ಬಂದಿಗೆ ತಗುಲಿ ಗಾಯಗೊಂಡಿದ್ದರು ಎಂದು ಪೊಲಿಸರು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಇನ್ನು ದುಬೆ ಪರಾರಿಯಾಗಲು ಯತ್ನಿಸುತ್ತಿದುದರಿಂದ ಪೊಲೀಸರು ಸಿಡಿಸಿದ ಗುಂಡುಗಳು ಆತನ ಬೆನ್ನಿಗೆ ನಾಟಬೇಕಿತ್ತು. ಅದರ ಬದಲು ದೇಹದ ಮುಂಭಾಗಕ್ಕೆ ನಾಟಿದ್ದು ಹೇಗೆ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ವಿಶೇಷ ಕಾರ್ಯಪಡೆ ಸಿಬ್ಬಂದಿ, ಆತ ನಮ್ಮ ಮೇಲೆ ಗುಂಡು ಸಿಡಿಸಲು ಮುಂದೆ ತಿರುಗಿದ್ದ. ಆಗ ಗುಂಡುಗಳು ಆತನ ದೇಹವನ್ನು ಮುಂಭಾಗದಿಂದ ಹೊಕ್ಕವು ಎಂದು ಸ್ಪಷ್ಟಪಡಿಸಿದರು. ದುಬೆ ಸಾವು ಪ್ರೀಪ್ಲಾನಡ್ ಎಂಬ ಕೆಲ ಆರೋಪಗಳು ಬಂದ ಬೆನ್ನಲ್ಲೇ ಪೊಲೀಸರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಘಟನೆಯಲ್ಲಿ ಮುಖ್ಯಪೇದೆ ಸರ್ವಿಂದರ್ ಸಿಂಗ್ ಸೆನಗಾರ್ ಅವರ ಎಡಗೈಗೆ ಗುಮಡು ತತಗುಲಿ ಗಾಯಗೊಂಡಿದ್ದರು. ಮತ್ತೋರ್ವ ಪೇದೆ ಬಿಮಲ್ ಕುಮಾರ್ ಅವರ ಎಡತೊಡೆಗೂ ಗುಂಡು ತಗುಲಿತ್ತು.
ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!
ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...








