Vikranth-rona | ಅಸಲಿ ಆಟ ಈಗ ಶುರು – ಒಟಿಟಿಯಲ್ಲಿ ಗುಮ್ಮನ ಹವಾ
ಬೆಳ್ಳಿ ಪರದೆ ಮೇಲೆ ಅಬ್ಬರಿಸಿ ಬೊಬ್ಬಿರಿದು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಾ, ಈಗಲೂ ಥಿಯೇಟರ್ ನಲ್ಲಿ ಚಾಲ್ತಿಯಲ್ಲಿರುವ ಸಿನಿಮಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ.
ಸದ್ಯ ಥಿಯೇಟರ್ ಅಂಗಳದಲ್ಲಿ ಆರ್ಭಟಿಸುತ್ತಿರುವ ವಿಕ್ರಾಂತ್ ರೋಣ, ಸೆಪ್ಟೆಂಬರ್ 2 ಕ್ಕೆ ಓಟಿಟಿಗೆ ಎಂಟ್ರಿಕೊಟ್ಟಿದ್ದಾನೆ.
ನಿರೀಕ್ಷೆಯಂತೆ ಗುಮ್ಮಾನ ಎಂಟ್ರಿಗೆ ಓಟಿಟಿ ಶೇಕ್ ಆಗಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರಿ ಕಂಟೆಂಟ್ ಇರುವ ವಿಕ್ರಾಂತ್ ರೋಣ ಓಟಿಟಿಯಲ್ಲಿ ಕಮಾಲ್ ಮಾಡುತ್ತಿದೆ.
ಸೆಪ್ಟಂಬರ್ 2 ರಂದು ಸುದೀಪ್ ಬರ್ತ್ ಡೇ ಹಿನ್ನೆಲೆಯಲ್ಲಿ ವಿಕ್ರಾಂತ್ ರೋಣ ಜಿ 5 ನಲ್ಲಿ ಸ್ಟ್ರೀಮಿಂಗ್ ಆಗಿತ್ತು.
ಹೀಗೆ ಸ್ಟ್ರೀಮಿಂಗ್ ಆದ ಕೇವಲ 24 ಗಂಟೆಗಳಲ್ಲಿ ಗುಮ್ಮ ದಾಖಲೆ ನಿರ್ಮಿಸಿದ್ದು, 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ.
ಅಂದಹಾಗೆ ನಿರೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾವನ್ನು ಜಾಕ್ ಮಂಜು ಅವರು ನಿರ್ಮಾಣ ಮಾಡಿದ್ದರು.
ಜುಲೈ 28 ರಂದು ಬಹು ಭಾಷೆಗಳಲ್ಲಿ ರಿಲೀಸ್ ಆಗಿದ್ದ ವಿಕ್ರಾಂತ್ ರೋಣ, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು.
ಇತ್ತೀಚಿನ ಮಾಹಿತಿ ಪ್ರಕಾರ ವಿಕ್ರಾಂತ್ ರೋಣ ವರ್ಲ್ಡ್ ವೇಡ್ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು.