ಡಿಸೆಂಬರ್ ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಸಾಧ್ಯತೆ
ಬೆಂಗಳೂರು : ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆಯ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಡಿಸೆಂಬರ್ ತಿಂಗಳನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಿನಿಮಾದ ನಿರ್ಮಾಪಕ ಜಾಕ್ ಮಂಜು ಮಾಹಿತಿ ನೀಡಿದ್ದಾರೆ.
ಚಿತ್ರ ರಿಲೀಸ್ ಬಗ್ಗೆ ಸುದ್ದಿ ವಾಹಿತಿಯೊಂದಿಗೆ ಮಾತನಾಡಿರುವ ಜಾಕ್ ಮಂಜು, ಎಲ್ಲಾ ಪರಿಸ್ಥಿತಿಗಳು ಸರಿಯಾಗಿದ್ದರೇ ಡಿಸೆಂಬರ್ ನಲ್ಲಿ ಸಿನಿಮಾವನ್ನು ರಿಲೀಸ್ ಮಾಡುತ್ತೇವೆ.
ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು..
ಇದೇ ವೇಳೆ ನಾವು ಈಗಲೇ ಸಿನಿಮಾ ರಿಲೀಸ್ ದಿನಾಂಕವನ್ನು ನಾವು ಘೋಷಿಸುವುದಿಲ್ಲ ಎಂದು ನಿರ್ಮಾಪಕರು, ದಿನಾಂಕ ಹೇಳಿ ಮತ್ತೆ ಮುಂದೆ ಹೋಗುವುದು ನಮಗೆ ಇಷ್ಟವಿಲ್ಲ.
ಸಿನಿಮಾ ಬಿಡುಗಡೆಗೆ ಇನ್ನೂ 10 ದಿನ ಇದೆ ಎಂದಾಗ ದಿನಾಂಕ ಕುರಿತು ನಾವು ಹೇಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ವಿಕ್ರಾಂತ್ ರೋಣ ಸಿನಿಮಾದ ಮೇಲೆ ಸಿನಿ ಪ್ರಿಯಯರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.