Vikrant Rona Twitter Review: ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಹೇಳಿದ್ದೇನು ?
ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮತ್ತೊಮ್ಮೆ ಕನ್ನಡದ ಚಿತ್ರ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ ಅಭಿನಯದ ನಿರೂಪ್ ಭಂಡಾರಿ ಅವರ ಕನಸಿನ ಚಿತ್ರ ದು ವಿಶ್ಯಾದ್ಯಂತ ತೆರೆಕಾಣುತ್ತಿದೆ. ನಿನ್ನೆ ರಾತ್ರಿಯಿಂದಲೇ ಸಿನಿಮಾ ನೋಡುಲು ಪ್ರೇಕ್ಷಕರುಥಿಯೇಟರ್ ಬಳಿ ಕಾದು ಕುಳಿತ್ತಾದ್ದಾರೆ ಫರ್ಸ್ ಡೇ ಫರ್ಸ್ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯಗಳು ಈಗಾಗಲೇ ಟ್ವೀಟರ್ ನಲ್ಲಿ ಹರಿದಾಡುತ್ತಿದೆ.
ವಿಕ್ರಾಂತ್ ರೋಣ ಒಟ್ಟಾರೆಯಾಗಿ ಒಂದು ಉತ್ತಮವಾದ ಆಕ್ಷನ್/ಹಾರರ್ ಥ್ರಿಲ್ಲರ್
ಉತ್ತಮ ತಾಂತ್ರಿಕ ಕೆಲಸಗಳೊಂದಿಗೆ ಆಸಕ್ತಿದಾಯಕ ಕಥೆಯನ್ನು ಆಕರ್ಷಕವಾಗಿ ಹೇಳಲಾಗಿದೆ. ಸುದೀಪ್ ಅದ್ಭುತವಾಗಿ ಮಾಡಿದ್ದಾರೆ. ಕೆಲವು ದೃಶ್ಯಗಳನ್ನು ಟ್ರಿಮ್ ಮಾಡಬಹುದಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನೋಡಬಹುದಾದಂತ ಉತ್ತಮ ಚಿತ್ರವಾಗಿದೆ ಎಂದಿದ್ದಾರೆ ವೆಂಕಿ ರೀವಿವ್ಯೂ
ರೇಟಿಂಗ್:3/5
#VikrantRona Overall a Pretty Good Action/Horror Thriller👍
Interesting story told in an engaging way with great technical work. Sudeep does great. Flipside, some filler scenes could be trimmed to make it more crisp but still one of the better watches in recent times
Rating:3/5
— Venky Reviews (@venkyreviews) July 28, 2022
#VikrantRona ಭಾರತದ ಅತ್ಯುತ್ತಮ 3D ಚಲನಚಿತ್ರಗಳಲ್ಲಿ ಒಂದು. ಸಸ್ಪೆನ್ಸ್‌ನೊಂದಿಗೆ ಬೆಸ್ಟ್ ಥ್ರಿಲ್ ನೀಡುತ್ತದೆ. ಪೈಸಾ ವಸೂಲ್ ಅನುಭವ,,, ಕನ್ನಡ ಇಂಡಸ್ಟ್ರಿ ಮತ್ತೊಂದು ಹಂತದಲ್ಲಿದೆ ಎಂದು ರಾಕೇಶ ಎನ್ನುವವರು ಟ್ವೀಟ್ ಮಾಡಿದ್ದಾರೆ.
#VikrantRona one of the best 3 D movie in India,,, Best thrill with suspence ,,, what a experience in 3 d totally paisa vasool,,, Kannada industry is in Another level 🔥 🔥 🔥 And collection don't worry guys it will be another level because movie is on 🔥🔥
— Rakesh appu (@Kotresh57392792) July 28, 2022
ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಚಿತ್ರವನ್ನ ನೋಡಿ ಹೊಗಳಿದ್ದಾರೆ.3Dಯಲ್ಲಿ ವಿಕ್ರಾಂತ್ ರೊಣ ಚಿತ್ರದ ಅನುಭವ ಅಧ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾನು ನಿನ್ನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ ಸಹೋದರ ಎಂದು ನಟ ರಿತೇಶ್ ಬರೆದುಕೊಂಡಿದ್ದಾರೆ.
Blockbuster Alert 🚨!! The experience of #VikrantRona in 3D is beyond spectacular. A bone chilling thriller. Gorgeously shot &directed Kudos to the man who carries the film with unprecedented swag & in deepest of deep baritone. @KicchaSudeep I am so so proud of you my brother !! pic.twitter.com/wJrIr8t2hH
— Riteish Deshmukh (@Riteishd) July 28, 2022
ಇನ್ನೂ ವಿಕ್ರಾಂತ್ ರೋಣ ಚಿತ್ರಕ್ಕೆ ಘಟಾನುಘಟಿಗಳು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಪ್ರಯೋಗಗಳನ್ನು ಮಾಡುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ವಿಶ್ಯುವಲ್ಸ್ ಅದ್ಭುತವಾಗಿದೆ. ಸುದೀಪ್ ಹಾಗೂ ಅವರ ತಂಡಕ್ಕೆ ನನ್ನ ಶುಭಾಶಯ’ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
Sudeep is always first in experimenting & taking up challenges. Can’t wait to see what he has done in #VikrantRona. The visuals look grand. My best wishes to @KicchaSudeep and the entire team for their release tomorrow.
— rajamouli ss (@ssrajamouli) July 27, 2022
ತಮಿಳು ನಟ ಕಾರ್ತಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅದ್ಭುತ ಟ್ರೈಲರ್ ನಂತರ ವಿಕ್ರಾಂತ್ ರೋಣ ನನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ. ಅಭಿನಂದನೆಗಳು ಕಿಚ್ಚ ಸುದೀಪ್ ಸರ್ ಮತ್ತು ಅದ್ಭುತ ತಂಡ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ!
Looking forward to watching #VikrantRona after that stunning trailer. Congratulations @KicchaSudeep sir and the amazing team for the grand release today!
— Actor Karthi (@Karthi_Offl) July 28, 2022