Vikranth Rona : ‘ಗರ ಗರ ಗರ ಗಗ್ಗರ ಗರ್ಬ ,, ಪಿರ ನೆಲ್ಕುರಿ ನೆತ್ತರ ಪರ್ಬ’..!!! ವಿಕ್ರಾಂತ್ ರೋಣಾ ಟ್ರೇಲರ್ ..!! ಒಂದೇ ಗಂಟೆಯಲ್ಲೇ ಹೊಸ ದಾಖಲೆ..!!
ಕಿಚ್ಚ… ಸುದೀಪ್ ಅವರ ಪವರ್ ಫುಲ್ ಆಕ್ಟಿಂಗ್ ,,, ಪವರ್ ಫುಲ್ ಡೈಲಾಗ್ ,, ಗೂಸ್ ಬಂಪ್ಸ್ ಸೀನ್… ಅಮೇಜಿಂಗ್ ಬಿಜಿಎಮ್ ,,, ಥ್ರಿಲ್ಲಿಂಗ್ ಸೆಟ್….!!! ಸಸ್ಪೆನ್ಸ್ ಭರಿತ ಸಿನಿಮಾ ವಿಕ್ರಾಂತ್ ರೋಣ…
ಈ ಸಿನಿಮಾದ ಟ್ರೇಲರ್ ಜೂನ್ 23ಕ್ಕೆ ರಿಲೀಸ್ ಆಗಿದೆ.. ಕನ್ನಡ , ಇಂಗ್ಲಿಷ್ , ಹಿಂದಿ , ತೆಲುಗು , ತಮಿಳು , ಮಲಯಾಳಂ ನಲ್ಲಿ ಟ್ರೇಲರ್ ರಿಲೀಸ್ ಆಗಿದ್ದು ,, ಎಲ್ಲರೂ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ..
ನೆಕ್ಸ್ಟ್ ಲೆವೆಲ್ ಟ್ರೇಲರ್ ಇದು ಎನ್ನುತ್ತಿದ್ದಾರೆ.. ಹಾಲಿವುಡ್ ರೇಂಜ್ ಗೆ ಸಿನಿಮಾವಿದೆ.. ಅದ್ರಲ್ಲೂ ಸಿನಿಮಾ 3 ಡಿ ಯಲ್ಲಿ ಬರೋದ್ರಿಂದ ಟ್ರೇಲರ್ ನೋಡಿದ ನಂತರ ಅಭಿಮಾನಿಗಳ ಕ್ರೇಜ್ ದುಪ್ಪಟ್ಟಾಗಿದೆ,..
KGF 2 , 777 ಚಾರ್ಲಿ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿ ಪವರ್ ಮತ್ತೊಮ್ಮೆ ವಿಶ್ವಕ್ಕೆ ತೋರಿಸಲು ಸಜ್ಜಾಗಿದೆ… ಈ ಸಿನಿಮಾ ಇಂಡಿಯನ್ ಬಾಕ್ಸ್ ಆಫೀಸ್ ಹಿಸ್ಟರಿಯಲ್ಲಿ ಹೊಸ ದಾಖಲೆ ಬರೆಯೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಸಿನಿಪಂಡಿತರು.. ಮೇಕಿಂಗ್ ಬಹಳ ರಿಚ್ ಆಗಿದೆ.. ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ.. 14 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.. ಮುಖ್ಯವಾಗಿ ಸಿನಿಮಾದ ಕನ್ನಡ , ತಮಿಳು , ತೆಲುಗು , ಹಿಂದಿ , ಇಂಗ್ಲಿಷ್ ಡಬ್ಬಿಂಗ್ ಅವತರಣಿಕೆಗೆ ಕಿಚ್ಚ ಸುದೀಪ್ ಅವರೇ ಧ್ವನಿ ನೀಡಿರೋದು ವಿಶೇಷ..
ಅಂದ್ಹಾಗೆ ಟ್ರೇಲರ್ ರಿಲೀಸ್ ಆದ ಒಂದೇ ಗಂಟೆಯಲ್ಲೇ ರೆಕಾರ್ಡ್ ಬರೆದಿದೆ..
ಗರ. ಗರ.. ಗರ ಗಗ್ಗರ ಗರ್ಬ : ಪಿರ ನೆಲ್ಕುರಿ ನೆತ್ತರ ಪರ್ಬ..!! ಕಿಚ್ಚ ಸುದೀಪ್ ಅವರು ಖಡಕ್ ಆಗಿ ಹೇಳುವ ಈ ಡೈಲಾಗೇ ಇಡೀ ಟ್ರೇಲರ್ ಗೆ ಹೈಲೇಟ್…
5 ಗಂಟೆ 2 ನಿಮಿಷಕ್ಕೆ ರಿಲೀಸ್ ಆದ ‘ವಿಕ್ರಾಂತ್ ರೋಣ’ ಟ್ರೈಲರ್ ಒಂದು ಗಂಟೆಗೆ ವೀವ್ಸ್ 5 ಲಕ್ಷ ದಾಟಿದೆ. ಒಂದು ಗಂಟೆಯಲ್ಲಿ ಕನ್ನಡದ ಟ್ರೈಲರ್ 522,328 ವೀಕ್ಷಣೆ ಪಡೆದ ದಾಖಲೆ ಬರೆದಿದೆ.
ಹಿಂದಿಯಲ್ಲೂ ಸಿನಿಮಾ ಮೇಲೆ ಕ್ರೇಜ್ ಇದೆ.. ವಿಕ್ರಾಂತ್ ರೋಣ ಟ್ರೈಲರ್ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದು, ಒಂದು ಗಂಟೆಯಲ್ಲಿ 220,297 ವೀಕ್ಷಣೆ ಪಡೆದುಕೊಂಡಿದೆ.
ವಿಕ್ರಾಂತ್ ರೋಣದ ತೆಲುಗು ಟ್ರೈಲರ್ 118,874 ವೀವ್ಸ್ ಪಡೆದುಕೊಂಡಿದೆ.
ತಮಿಳಿನಲ್ಲಿ ಒಂದು ಗಂಟೆಗೆ 44,344 ವೀವ್ಸ್ ಕಂಡಿದೆ. ಮಲಯಾಳಂನಲ್ಲಿ ಒಂದು ಗಂಟೆಗೆ 32,141 ವೀವ್ಸ್ ಪಡೆದುಕೊಂಡಿದೆ..







