ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ : ಟಾಪ್ 10 ರಲ್ಲಿಲ್ಲ RRR ಗೆ ಸ್ಥಾನ..! ನಂ. 1 ನಲ್ಲಿರೋದು ಕನ್ನಡದ ‘ವಿಕ್ರಾಂತ್ ರೋಣ’.!
ಪ್ರಸ್ತುತ ಭಾರತೀಯ ಸಿನಿಮಾ ರಂಗದ ಹೈ ಓಲ್ಟೇಜ್ , ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳು ಯಾವು ಅಂತ ಕೇಳಿದ್ರೆ ಸಾಮಾನ್ಯವಾಗಿ ಎಲ್ಲರೂ ಕೊಡೋ ಉತ್ತರ KGF 2 , RRR , ಪುಷ್ಪಾ. ಆದ್ರೆ ಇದೀಗ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ.. ಯಾಕಂದ್ರೆ ಭಾರತೀಯ ಸಿನಿಮಾಗಳಿಗೆ ರೇಟಿಂಗ್ ನೀಡಿರುವ ಐಎಂಡಿಬಿ ಅಭಿಮಾನಿಗಳ ವಲಯದಲ್ಲಿ ಮೊದಲನೇ ಸ್ಥಾನದಲ್ಲಿ ಇರೋದು ಇದ್ಯಾವ ಸಿನಿಮಾಗಳು ಅಲ್ಲ.. ಬದಲಾಗಿ ನಮ್ಮ ಕನ್ನಡದ ಕಿಚ್ಚ ಸುದೀಪ್ ಅಭಿನಯದ “ವಿಕ್ರಾಂತ್ ರೋಣ” ..
ಆದ್ರೆ ಪ್ರಸ್ತುತ, ಭಾರತದ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ, ಆಡಿಯೋ ಖರೀದಿಯಲ್ಲಿ KGF 2 ದಾಖಲೆ ಮುರಿದಿರುವ RRR ಚಿತ್ರಕ್ಕೆ ಟಾಪ್ ಹತ್ತರೊಳಗೂ ಸ್ಥಾನವಿಲ್ಲ ಎನ್ನೋದು ಗಮನಾರ್ಹ. ಬಾಹುಬಲಿಯಂತಹ ಸರ್ವಕಾಲೀನ ಸೂಪರ್ ಹಿಟ್ ಸಿನಿಮಾ ಖ್ಯಾತಿಯ ರಾಜಮೌಳಿ ನಿರ್ದೇಶನದ RRR ಸಿನಿಮಾ ಟಾಪ್ 10ರಲ್ಲೂ ಇಲ್ಲದೇ ಇರೋದು ಸದ್ಯ ಅಚ್ಚರಿಗೆ ಕಾರಣವಾಗಿದೆ.. ಆದ್ರೆ ಕನ್ನಡಾಭಿಮಾನಿಗಳು ಹೆಮ್ಮೆಯಿಂದ ಬೀಗುವಂತಾಗಿದೆ.. ಕಾರಣ ನಂಬರ್ 1 ಸ್ಥಾನದಲ್ಲಿರೋದು ವಿಕ್ರಾಂತ್ ರೋಣ. ಆಶ್ಚರ್ಯ ಅಂದ್ರೆ ಕೆಜಿಎಫ್ 2 ಚಿತ್ರಕ್ಕೂ ಮೊದಲ ಸ್ಥಾನ ಸಿಕ್ಕಿಲ್ಲ.
ಭಾರತೀಯ ಸಿನಿಮಾಗಳಿಗೆ ರೇಟಿಂಗ್ ನೀಡಿರುವ ಐಎಂಡಿಬಿ ಅಭಿಮಾನಿಗಳ ವಲಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಟಾಪ್‌ನಲ್ಲಿ ತಮ್ಮ ನೆಚ್ಚಿನ ಹೀರೋ ಸಿನಿಮಾ ಇದ್ದರೆ ಅದು ಹೆಮ್ಮೆಯಾಗಿ ಭಾವಿಸುವ ಟ್ರೆಂಡ್ ಇದೆ. ಇದೀಗ, ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಪಟ್ಟಿಯಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ. ಇನ್ನೂ 2ನೇ ಸ್ಥಾನದಲ್ಲಿಯೂ ನಮ್ಮ ಹೆಮ್ಮಯ ಕನ್ನಡದ ಸಿನಿಮಾ ಕೆಜಿಎಫ್ 2 ಇದೆ.. ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ ಗಾಗಿ ಭಾರತೀಯ ಸಿನಿಮಾರಂಗ ಕಾತರದಿಮದ ಕಾಯುತ್ತಿದೆ..
ಐಎಂಡಿಬಿ ಪ್ರಕಟಿಸಿರುವ ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಕೆಜಿಎಫ್ ಚಾಪ್ಟರ್ 2 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ನವರಸ ಸಿನಿಮಾ ಇದ್ರೆ 4ನೇ ಸ್ಥಾನದಲ್ಲಿ ಶೇರ್‌ಷಾ ಸಿನಿಮಾವಿದೆ.
ಅಶ್ಲೀಲ ವಿಡಿಯೋ ನಿರ್ಮಾಣ : ನ್ಯಾಯಾಂಗ ಬಂಧನದಲ್ಲಿ ಕುಂದ್ರಾ – ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟಿ..!
5ನೇ ಸ್ಥಾನದಲ್ಲಿ ಪುಷ್ಪ
ಇನ್ನೂ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಮತ್ತೊಂದು ಹೈವೋಲ್ಟೇಜ್ ಸಿನಿಮಾ ಪುಷ್ಪ ಈ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ..
6ನೇ ಸ್ಥಾನದಲ್ಲಿ ಭುಜ್ ದಿ ಪ್ರೈಡ್ ಆಫ್ ಇಂಡಿಯಾ,
7ನೇ ಸ್ಥಾನದಲ್ಲಿ ತಿಮ್ಮರಸು,
8ನೇ ಸ್ಥಾನದಲ್ಲಿ ಗಂಗುಬಾಯಿ ಕಥಿಯಾವಾಡಿ,
9ನೇ ಸ್ಥಾನದಲ್ಲಿ ರಾಧೇ ಶ್ಯಾಮ್
10ನೇ ಸ್ಥಾನದಲ್ಲಿ ಅನೆಕ್ ಇದೆ.
ಇದರ ಅರ್ಥ ನಿರೀಕ್ಷೆಯಂತೆ ಟಾಪ್ 1 ಅಥವ 2 ಅಲ್ಲ ಟಾಪ್ 10 ರಲ್ಲೂ RRR ಸಿನಿಮಾ ಸ್ಥಾನ ಪಡೆಯದೇ ಇರೋದಕ್ಕೆ ಅಚ್ಚರಿಗೆ ಕಾರಣವಾಗಿದೆ.. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಟಾಪ್ 10 ನಲ್ಲಿ ಟ್ರೆಂಡ್ ಆಗುತ್ತಿಲ್ಲ.