Vikranth Rona : ಯಶ್ ಇಂಡಿಯನ್ ಬಾಕ್ಸ್ ಆಫೀಸ್ ಗೆದ್ರು , ಸುದೀಪ್ ವರ್ಲ್ಡ್ ಬಾಕ್ಸ್ ಆಫೀಸ್ ಗೆಲ್ತಾರೆ : ಉಪ್ಪಿ
ಕನ್ನಡ ಮತ್ತು ಪ್ಯಾನ್ ಇಂಡಿಯಾ ಮಟ್ಟಿಗೆ ಭಾರಿ ನಿರೀಕ್ಷೆ ಹುಟ್ಟಿಸಿರುವ ವಿಕ್ರಾಂತ್ ರೋಣಾ ಇದೇ ಜುಲೈ 28 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ಚಿತ್ರದ ಪ್ರಚಾರದ ವಿಕ್ರಾಂತ್ ರೋಣ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮವನ್ನ 26 ರ ಮಂಗಳವಾರ ಸಂಜೆ ಅದ್ಧೂರಿಯಾಗಿ ನೆಡೆಸಲಾಯಿತು. ಈವೆಂಟ್ ನ ,ಮುಖ್ಯ ಅತಿಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಗವಹಿಸಿ ಕಿಚ್ಚ ಸುದೀಪ್ ಅವರ ಶ್ರಮ ಮತ್ತು ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದಾರೆ.
ಯಶ್ ಇಂಡಿಯನ್ ಬಾಕ್ಸ್ ಆಫೀಸ್ ಗೆದ್ರ , ಕಿಚ್ಚ ಸುದೀಪ್ ವಿಶ್ವದ ಬಾಕ್ಸ್ ಆಫೀಸ್ ಗೆಲ್ತಾರೆ…
ಸುಮಾರು 14 ಭಾಷೆಗಳಲ್ಲಿ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗ್ತಿದ್ದು , ಸಾಕಷ್ಟು ವಿಶೇಷತೆಗಳಿಂದ ಸಿನಿಮಾ ಚರ್ಚೆಯಾಗ್ತಿದೆ… ಸಿನಿಮಾ 3ಡಿಯಲ್ಲಿ ತೆರೆಕಾಣ್ತಿದೆ.. ಜೊತೆಗೆ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಆಗ್ತಿದೆ.. ಹೀಗಾಗಿ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್… ಹಾಲಿವುಡ್ ರೇಂಜ್ ಗೆ ಸಿನಿಮಾ ಸೌಂಡ್ ಮಾಡ್ತಿದೆ..
ಅದ್ಧೂರಿಯಾಗಿ ಆಯೋಜಿಸಿದ್ದ ವಿಕ್ರಾಂತ್ ರೋಣ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿ ಮಾತನಾಡಿದ ಉಪ್ಪಿ ಈ ಸಿನಿಮಾದ ಹಲವು ತುಣುಕುಗಳನ್ನು ನಾನು ಈಗಾಗಲೇ ನೋಡಿದ್ದೇನೆ. ಸುದೀಪ್ ಹಾಗೂ ನಿರ್ದೇಶಕರು ನನಗೆ ಕೆಲವು ದೃಶ್ಯಗಳನ್ನು ಈಗಾಗಲೇ ತೋರಿಸಿದ್ದಾರೆ. ಸಿನಿಮಾ ಅತ್ಯದ್ಭುತವಾಗಿದೆ. ಅಲ್ಲದೇ ‘ ನಿರ್ದೇಶಕರ ಮೂರು ವರ್ಷದ ಶ್ರಮ ಇದು’ ಎನ್ನುತ್ತಾ ನಿರ್ದೇಶಕ ಅನುಪ್ ಭಂಡಾರಿಗೆ ಧನ್ಯವಾದ ಅರ್ಪಿಸಿದ್ದಾರೆ.. ಅಷ್ಟಟೇ ಅಲ್ಲ ಇದು ಪ್ಯಾನ್ ಇಂಡಿಯನ್ ಅಲ್ಲ ಪ್ಯಾನ್ ವರ್ಲ್ಡ್. ಕೇವಲ ವಿಕ್ರಾಂತ್ ರೋಣ ಅಲ್ಲ ಇದು ವಿಕ್ಟರಿ ರೋಣ.. ಸಿನಿಮಾ ಈಗಾಗಲೇ ಗೆದ್ದಾಗಿದೆ ಎಂದಿದ್ದಾರೆ..








