Mandya | ಕಾವೇರಿ ಪ್ರವಾಹದಲ್ಲಿ ಶವವನ್ನು ಹೊತ್ತೋಯ್ದ ಜನರು
ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವರುಣ ಸಾಕಷ್ಟು ಅವಾಂತರಗಳು ಸೃಷ್ಠಿ ಮಾಡಿದ್ದಾನೆ.
ಜೊತೆಗೆ ಕೆಆರ್ ಎಸ್ ಡ್ಯಾಂನಿಂದ ನೀರು ಹೊರ ಹರಿಸಲಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಜನರು ಸ್ಮಶಾನಕ್ಕೆ ಹೋಗಲು ಪರದಾಟ ನಡೆಸುವಂತೆ ಆಗಿದೆ.

ಕಾವೇರಿ ಪ್ರವಾಹದ ನಡುವೆಯೇ ಮಹದೇವಪುರದ ಜನರು ಶವವೊತ್ತು ಸ್ಮಶಾನಕ್ಕೆ ತೆರಳಿದ್ದಾರೆ.
ಕಾವೇರಿ ಭೋರ್ಗರೆತಕ್ಕೆ ಮಹದೇವಪುರದ ಸ್ಮಶಾನಕ್ಕೆ ತೆರಲುವ ರಸ್ತೆ ಜಲಾವೃತಗೊಂಡಿದೆ.
ನಿನ್ನೆ ಕ್ಯಾನ್ಸರ್ನಿಂದ ಸುಲೋಚನ (48) ಎಂಬ ಮಹಿಳೆ ಮೃತಪಟ್ಟಿದ್ದರು.
ಆದ್ರೆ ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರ ಪರದಾಟ ನಡೆಸಬೇಕಾಗಿದೆ.
ರಸ್ತೆ ನೀರಿನಲ್ಲಿ ಮುಳುಗಡೆಯಾದ ಕಾರಣದಿಂದಾಗಿ ಪ್ರವಾಹದ ನೀರಿನಲ್ಲಿ ಮಹಿಳೆಯ ಶವ ತೆಗೆದುಕೊಂಡು ಜನರು ಸ್ಮಶಾನಕ್ಕೆ ಹೋಗಿದ್ದಾರೆ.








