ದೇವರ ನೆಪದಲ್ಲಿ ಕಾಡುಪ್ರಾಣಿಗಳ ಮಾರಣಹೋಮ
ಬೆಂಗಳೂರಿನ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ಘಟನೆ
ಪ್ರಾಣಿಗಳನ್ನು ಬೇಟೆಯಾಡಿ ಬಹಿರಂಗವಾಗಿ ಹರಾಜು
ಬೆಂಗಳೂರು : ದೇವರ ನೆಪದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾರಣಹೋಮ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ನಡೆದಿದೆ.
ಕೋಲುಬೇಟೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಬಾರದು ಎಂದು ನಿಯಮವಿದೆ.
ಆದ್ರೆ ಯಂಟಗಾನಹಳ್ಳಿ ಗ್ರಾಮಸ್ಥರು ಈ ನಿಯಮವನ್ನು ಗಾಳಿ ತೂರಿದ್ದಾರೆ.
ಸೋಲ ದೇವನಹಳ್ಳಿಯ ಬ್ಯಾಟರಾಯಸ್ವಾಮಿ ದೇವರ ಉತ್ಸವ ಮಾಡಿರುವ ಯಂಟಗಾನಹಳ್ಳಿ ಗ್ರಾಮಸ್ಥರು ಬಳಿಕ ಕಾಡು ಪ್ರಾಣಿಗಳನ್ನು ಬೇಟೆಯಾಡಿದ್ದಾರೆ.
ಅಲ್ಲದೇ ಆ ಪ್ರಾಣಿಗಳನ್ನು ರಾತ್ರಿ ಮೆರವಣಿಗೆ ಮಾಡಿ ಊರಿನ ಮಧ್ಯೆ ಹರಾಜು ಹಾಕಿದ್ದಾರೆ.