ಇತ್ತೀಚೆಗಷ್ಟೇ ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅವರು ಆದಿಪುರುಷ್ ಟೈಟಲ್ ನ ಹೊಸ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಯಲಾಗ್ತಿದ್ದಂತೆ ಎಲ್ಲೆಲ್ಲೂ ಇದೇ ವಿಚಾರವಾಗಿಯೇ ಚರ್ಚೆ ಶುರುವಾಗಿಬಿಟ್ಟಿದೆ. ಇದರ ಬೆನ್ನಲ್ಲೇ ಚಿತ್ರದ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಗೊತ್ತಾಗಿದೆ. ಸಿನೆಮಾದ ಮತ್ತೊಂದು ಪಾತ್ರ ರಿವೀಲ್ ಆಗಿದೆ.
ಆದಿಪುರುಷ್ ಗೆ ಪ್ರಬಾಸ್ ನಾಯಕ. ಆದ್ರೆ ಚಿತ್ರದಲ್ಲಿ ವಿಲ್ಲನ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿಖಾನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಚಿತ್ರದಲ್ಲಿ ನಟಿಸುವುದಕ್ಕೆ ಈಗಾಗಲೇ ಸೈಫ್ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ.
ಅಂದ್ಹಾಗೆ ಈ ಚಿತ್ರಕ್ಕೆ ಟಿ-ಸೀರೀಸ್ ನ ಭೂಷಣ್ ಕುಮಾರ್ ಅವರು ಬಂಡವಾಳ ಹೂಡುತ್ತಿದ್ರೆ, ನಿರ್ದೇಶಕ ಓಂ ರೌತ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ.