ತಂದೆ ಹೆಸರಲ್ಲಿ ಟೈಗರ್ ಟಾಕಿಸ್ ಸಂಸ್ಥೆ ಹುಟ್ಟು ಹಾಕಿದ ವಿನೋದ್ ಪ್ರಭಾಕರ್
ಸ್ಯಾಂಡಲ್ವುಡ್ ನಲ್ಲಿ ಮರಿ ಟೈಗರ್ ಎಂದೆ ಗುರುತಿಸಿಕೊಂಡಿರುವ ವಿನೋದ್ ಪ್ರಭಾಕರ್ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ರಾಬರ್ಟ್ ಸಿನಿಮಾದ ವಿಶೇಷ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿರುವ ವಿನೋದ್ ಪ್ರಭಾಕರ್ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳು ತೆರೆಗೆ ಬರಲು ರೆಡಿ ಇದ್ದು ಕೆಲವು ಸಿನಿಮಾಗಳು ಶೂಟಿಂಗ್ ನಲ್ಲಿವೆ.
ಈ ನಡುವೆಗೆ ಅಭಿಮಾನಿಗಳಿಗೆ ಇನ್ನೋಂದು ಖುಷಿ ಸುದ್ದಿಯನ್ನ ವಿನೋದ್ ನೀಡಿದ್ದಾರೆ. ನಟನೆಯ ಜೊತೆ ನಿರ್ಮಾಣದ ಸಾಹಸಕ್ಕೂ ಕೈ ಹಾಕಿರುವ ವಿನೋದ್ ಟೈಗರ್ ಟಾಕಿಸ್ ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಗೆ ಪತ್ನಿ ನಿಶಾ ಪ್ರಭಾಕರ್ ನಿರ್ಮಾಪಕಿಯಾಗಿದ್ದಾರೆ.
ಟೈಗರ್ ಟಾಕಿಸ್ ಸಂಸ್ಥೆಯ ಮೊಟ್ಟ ಮೊದಲ ಸಿನಿಮಾವನ್ನ ಅನೌನ್ಸ ಮಾಡಿದ್ದು ಚಿತ್ರಕ್ಕೆ ಲಂಕಾಸುರ ಎಂದು ನಾಮಕರಣ ಮಾಡಲಾಗಿದೆ. ರಾಬರ್ಟ್ ನಲ್ಲಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ಗಡ್ಡ ಬಿಟ್ಟು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೇನೆಂದರೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ.
ಲಂಕಾಸುರ ಚಿತ್ರವನ್ನ ಪ್ರಮೋದ್ ಕುಮಾರ್ ಎಂಬುವವರು ನಿರ್ದೇಶಿಸುತ್ತಿದ್ದು, ಹಿರಿಯ ನಟ ದೇವರಾಜ್, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ನಟಿಸುತ್ತಿದೆ. ವಿಜೇತ ಕೃಷ್ಣ್ ಸಂಗೀತ ಸಂಯೋಜನೆ, ಸುಜ್ಞಾನ್ ಛಾಯಗ್ರಹಣ ಚಿತ್ರಕ್ಕಿದೆ.







