ಢಾಕಾ: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಬಾಂಗ್ಲಾದೇಶದ (Bangladesh)ಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದೆ.
ಢಾಕಾದಲ್ಲಿ ರಾತ್ರಿ ವಿದ್ಯಾರ್ಥಿಗಳು ಮತ್ತು ಅನ್ಸಾರ್ ಸದಸ್ಯರ ನಡುವೆ ಹಿಂಸಾತ್ಮಕ ಘರ್ಷಣೆಗಳು (Clash At Secretariat) ನಡೆದಿವೆ ಎಂಬ ಕುರಿತು ವರದಿಯಾಗಿವೆ. ಘಟನೆಯಲ್ಲಿ ಎರಡೂ ಕಡೆಯ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನ್ಸರ್ ಸದಸ್ಯರು ನಿರಂಕುಶ ಪ್ರಭುತ್ವದ ಏಜೆಂಟ್‌ಗಳು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಆಂತರಿಕ ಭದ್ರತೆ ನೀಡುತ್ತಿರುವ ಅನ್ಸಾರ್ ಸದಸ್ಯರು (Ansar Members) ನಮ್ಮ ಉದ್ಯೋಗವನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವಿಚಾರವಾಗಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದೇಶದಲ್ಲಿ ಸುಮಾರು 60 ಲಕ್ಷ ಅನ್ಸಾರ್ ಸದಸ್ಯರಿದ್ದಾರೆ. ಇವರು ದೇಶದ ಒಳಗ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಈ ಅನ್ಸಾರ್ ಸದಸ್ಯರು ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ ಏಜೆಂಟ್‌ಗಳು. ಶೇಖ್ ಹಸೀನಾ ಅಣತಿಯಂತೆ ನಮ್ಮ ಮೇಲೆ ಇವರಿಂದ ಹಲ್ಲೆ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.