ಅಮೆರಿಕಾದಲ್ಲಿ ಭುಗಿಲೆದ್ದ ಹಿಂಸಾಚಾರ : ಅಧಿಕಾರ ಉಳಿಸಿಕೊಳ್ಳಲು ಟ್ರಂಪ್ ವಿಫಲ ಪ್ರಯತ್ನ : ಸಂಘರ್ಷದಲ್ಲಿ ನಾಲ್ವರು ಬಲಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರ ಉಳಿಸಿಕೊಳ್ಳಲು ಅಕ್ರಮ ಮಾರ್ಗ ಅನುಸರಿಸಿದ್ದಾರೆ. ಟ್ರಂಪ್ ಬೆಂಬಲಿಗರು ಸದ್ಯ ಅಮೆರಿಕಾದಲ್ಲಿ ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಹೌದು ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್ ಗೆ ಮುತ್ತಿಗೆ ಹಾಕಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ಇಡೀ ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದೆ. ಇಡೀ ವಿಶ್ವದಾದ್ಯಂತ ಸಂಚಲ ಸೃಷ್ಟಿ ಮಾಡಿದೆ. ಇಡೀ ಜಗತ್ತೇ ವಿಶ್ವದ ದೊಡ್ಡಣ್ಣನತ್ತ ನೋಡುವಂತಾಗಿದೆ.
ಇತ್ತ ಘಟನೆ ಹಿನ್ನೆಲೆ ವಾಷಿಂಗ್ಟನ್ ನಲ್ಲಿ 15 ದಿನಗಳವರೆಗೆ ಎಮರ್ಜೆನ್ಸಿ ವಿಸ್ತರಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ನಿಷ್ಠರಾಗಿರುವ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿದ್ದು, ಬುಧವಾರ ಯುಎಸ್ ಕ್ಯಾಪಿಟಲ್ ಗೆ ನುಗ್ಗಿ ಚುನಾಯಿತ ಪ್ರತಿನಿಧಿಗಳಿಗೆ ತಲೆಮರೆಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಚುನಾವಣೆಯನ್ನು ರದ್ದುಗೊಳಿಸಲು ಹಿಂಸಾಚಾರಕ್ಕಿಳಿದಿದ್ದು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣೀರಾಕಿದ ಸಿರಾಜ್
‘ಟ್ರಂಪೇ ನಮ್ಮ ಅಧ್ಯಕ್ಷರು’, ‘ಚುನಾವಣೆಯಲ್ಲಿ ಟ್ರಂಪ್ ಗೆದ್ದಿದ್ದಾರೆ’ ಅಂತೆಲ್ಲಾ ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಟ್ರಂಪ್ ಬೆಂಬಲಿಗರ ನಡುವೆ ಘರ್ಷಣೆ ನಡೆದು ಕನಿಷ್ಠ 4 ಜನ ಮೃತಪಟ್ಟಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಓರ್ವ ಮಹಿಳೆ ಕೂಡ ಸೇರಿದ್ದಾಳೆ. ಇದುವರೆಗೆ 52 ಜನರನ್ನ ಅರೆಸ್ಟ್ ಮಾಡಲಾಗಿದೆ. ಕ್ಯಾಪಿಟಲ್ ಬಿಲ್ಡಿಂಗ್ ಒಳಗೆ ಎರಡು ಪೈಪ್ ಬಾಂಬ್ ಕೂಡ ಸಿಕ್ಕಿದೆ. ಘರ್ಷಣೆ ವೇಳೆ ಕಟ್ಟಡದೊಳಗೆ ಇದ್ದ ಕಾಂಗ್ರೆಸ್ ಸದಸ್ಯರನ್ನ ಪೊಲೀಸರು ಬೇರೆ ಸ್ಥಳಕ್ಕೆ ಶಿಫ್ಟ್ ಮಾಡಿದ್ದಾರೆ.
‘ಸ್ವೀಟಿ’ ಖಾತೆಗೆ ಹಣ : ಇದು ‘ಡಿಂಗ್ ಡಾಂಗ್’ ಕೇಸ್ ಎಂದ ಸಂಬರ್ಗಿ..!
ಇದೆಲ್ಲದರ ನಡುವೆ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ ಹಿನ್ನೆಲೆ ಡೊನಾಲ್ಡ್ ಟ್ರಂಪ್ ಅವರ ಹಲವು ಟ್ವೀಟ್ ಮತ್ತು ಪೋಸ್ಟ್ಗಳನ್ನ ಟ್ವಿಟ್ಟರ್, ಫೇಸ್ಬುಕ್ ಡಿಲಿಟ್ ಮಾಡಿವೆ. ಅವರ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರಂಭದಿಂದಲೂ ಡೊನಾಲ್ಡ್ ಟ್ರಂಪ್ ಸೋಲನ್ನ ಒಪ್ಪಿಕೊಳ್ತಿರಲಿಲ್ಲ. ಇದರ ನಡುವೆಯೇ ಈ ಘಟನೆ ನಡೆದಿದ್ದು, ಅಮೆರಿಕದಂತಹ ಅಮೆರಿಕವೇ ಬೆಚ್ಚಿಬಿದ್ದಿದೆ.
ನನ್ನ ಕಚೇರಿಯಲ್ಲಿರುವುದಕ್ಕಿಂತ ಹೆಚ್ಚಿನ ಮಾಹಿತಿ ಏಜೆನ್ಸಿ ಬಳಿ ಇದೆ – ರಾಬರ್ಟ್ ವಾದ್ರಾ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದ ಚುನಾವಣೆಯಲ್ಲಿ ಜೋ ಬೈಡೆನ್ ವಿಜೇತರಾಗಿದ್ದು, ಅವರ ಗೆಲುವನ್ನು ತಡೆದು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಮುಂದುವರೆಯುವಂತೆ ಮಾಡಲು ವಿಫಲ ಪ್ರಯತ್ನ ನಡೆಸಲಾಗಿದೆ. ಇನ್ನೂ ಟ್ರಂಪ್ ಬೆಂಬಲಿಗರ ನಡೆಯನ್ನ ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಧಿಕಾರದಲ್ಲಿ ಮುಂದುವರೆಯಲು ವಿಫಲ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಉಳಿದಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವ ನಾಯಕರು ಘಟನೆಯನ್ನ ಖಂಡಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel