ವಿಪಕ್ಷವಾಗಿ ಇರೋದಕ್ಕೆ ಕಾಂಗ್ರೆಸ್ ಯೋಗ್ಯವಲ್ಲ : ಸುಧಾಕರ್
ಚಿಕ್ಕಬಳ್ಳಾಪುರ : ವಿರೋಧ ಪಕ್ಷವಾಗಿ ಇರೋದಕ್ಕೆ ಕಾಂಗ್ರೆಸ್ ಯೋಗ್ಯವಾದದ್ದಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟೀಕಿಸಿದ್ದಾರೆ.
ಅರವತ್ತೇಳನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಇರ್ಲಿಕ್ಕೆ ಯೋಗ್ಯ ಅಲ್ಲ. ಸದ್ಯ ಕಾಂಗ್ರೆಸ್ ದೇಶಗಲ್ಲಿ ಅಸ್ತಿತ್ವ ಕಳೆದುಕೊಂಡಿದೆ.
ಪೇಟೆರೌಡಿ.. ಜಲೀಲ.. ಸುಮಲತಾ – ಪ್ರತಾಪ್ ಸಿಂಹ ಮಧ್ಯೆ ವಾಗ್ಯುದ್ಧ
ಅದು ಗೋಡೆ ಮೇಲೆ ಬರೆದಿರುವ ಸತ್ಯ ಎಂದು ಸುಧಾಕರ್ ಟೀಕಿಸಿದರು. ಇನ್ನು ಜನರ ಅಭಿವೃದ್ಧಿ, ಸುಭದ್ರ ಸರ್ಕಾರ ನಮ್ಮ ನಿಲುವಾಗಿದೆ ಎಂದು ತಿಳಿಸಿದರು.
ಇನ್ನು ವೀರಶೈವ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಬಗ್ಗೆ ಮಾತನಾಡಿ, ಇದರ ಬಗ್ಗೆ ನಾನಗೆ ಅಷ್ಟೇನು ಗೊತ್ತಿಲ್ಲ, ಸಿಎಂ ತೀರ್ಮಾನದ ಬಗ್ಗೆ ಈಗ ಗೊತ್ತಾಯ್ತು.
ಅನೇಕ ಅಭಿವೃದ್ಧಿ ನಿಗಮಗಳು ಮಾಡೋದ್ರಿಂದ ಸಮುದಾಯದ ಅಭಿವೃದ್ಧಿಗೆ ಮಹತ್ವ ಸಿಗುತ್ತೆ.
ರಾಜ್ಯ ಬಿಜೆಪಿ ನಾಯಕರಿಕೆ `ಹೈ’ ಕಮಾಂಡ್ ಶಾಕ್
ಇದರಿಂದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಮಹತ್ವ ಸಿಗಲಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ನಿಗಮಕ್ಕೆ ಇನ್ನು ಬೇಡಿಕೆಗಳು ಹೆಚ್ಚಾಗಲಿದೆ ಎಂದು ತಿಳಿಸಿದರು.
ಇನ್ನು ಈ ಸಮಾರಂಭದಲ್ಲಿ ಸಂಸದರಾದ ಬಿ.ಎನ್. ಬಚ್ಚೇಗೌಡ, ಸಚಿವರಾದ ಎಸ್.ಟಿ. ಸೋಮಶೇಖರ್, ಬಿ.ಎ. ಬಸವರಾಜು, ಶಾಸಕರಾದ ಸುಬ್ಬಾರೆಡ್ಡಿ,
ಕೆ.ವೈ. ನಂಜೇಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚಿಕ್ಕನರಸಿಂಹಯ್ಯ (ಚಿನ್ನಿ), ಜಿಲ್ಲಾಧಿಕಾರಿ ಆರ್. ಲತಾ,
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಸಹಕಾರ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










