viral
ಕೋಲ್ಕತ್ತಾ: ನಮ್ಮ ಸಮಾಜದಲ್ಲಿ ನಾವೇ ಕೆಲವೊಂದು ರೀತಿ ರಿವಾಜುಗಳನ್ನ ರೂಡಿಸಿಕೊಂಡು ಬಮದಿದ್ದೇವೆ. ಸಮಾಜ , ಟ್ರೆಂಡ್, ಜೆನರೇಶನ್ ಬದಲಾದ್ರು, ಜನರ ಮನಸ್ಥಿತಿ ಮಾತ್ರ ಬದಲಾಗ್ತಿಲ್ಲ. ಇದಕ್ಕೆ ಉದಾಹರಣೆ ಅನ್ನೋ ಹಾಗೆ ಪಶ್ಚಿಮಬಂಗಾಳದಲ್ಲಿ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬರನ್ನ ಸಂಬಂಧಿಗಳು ಅಪಹಾಸ್ಯ ಮಾಡಿದ್ದು, ಅವರೆಲ್ಲರೂ ಬಾಯಿಗೆ ಪ್ಲಾಸ್ಟರ್ ಹಾಕಿಕೊಳ್ಳುವಂತೆ ಅವರ ಮಗ ತಕ್ಕ ಪಾಠವನ್ನೇ ಕಲಿಸಿದ್ದು, ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿದ್ದಾನೆ. ಹೌದು ಆತ ಕೀಳು ಮನಸ್ಥಿತಿ ಹಂದಿದ್ದ ಸಂಬಂಧಿಕರಿಗೆ ಉತ್ತರಿಸಿರುವ ಪರಿ ಹೇಗಿದೆ ಗೊತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಅಂದ್ಹಾಗೆ ಕೋಲ್ಕತ್ತಾ ಮೂಲದ 25 ವರ್ಷದ ಪುಷ್ಪಕ್ ಸೇನ್ ಅವರ ತಾಯಿ (54) ಇತ್ತೀಚೆಗೆ ಪಾರ್ಟಿಯೊಂದಕ್ಕೆ ತೆರಳಿದ್ದರು. ಈ ಪಾರ್ಟಿಗೆ ಕೆಂಪು ಲಿಪ್ಸ್ಟಿಕ್ ಅನ್ನು ಹಚ್ಚಿಕೊಂಡು ಹೋಗಿದ್ದರಂತೆ. ಆದರೆ ಅದಕ್ಕೆ ಅವರ ಸಂಬಂಧಿಗಳು ಅವರನ್ನ ಆಡಿಕೊಂಡು ಅಪಹಾಸ್ಯ ಮಾಡಿದ್ದಾರಂತೆ. ಇದರಿಂದ ಪುಷ್ಪಕ್ ಮನಸ್ಸಿಗೆ ತೀವ್ರ ನೋವಾಗಿದೆ. ಹೀಗಾಗಿ ಸಂಬಂಧಿಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ ಪುಷ್ಪಕ್ ಅವರು ಗಾಢ ಕೆಂಪು ಲಿಪ್ಸ್ಟಿಕ್ ಹಚ್ಚಿಕೊಂಡು ಫೋಟೋ ತೆಗೆದುಕೊಂಡು ತನ್ನ ತಾಯಿಗೆ ಅವಮಾನ ಮಾಡಿದ ಅಷ್ಟೂ ಸಂಬಂಧಿಗಳಿಗೂ ಕಳುಹಿಸಿದ್ದಾರೆ. ಜೊತೆಗೆ ಗುಡ್ ಮಾರ್ನಿಂಗ್, ಗೆಟ್ ವೆಲ್ ಸೂನ್ ಎನ್ನುವ ಸಂದೇಶವನ್ನೂ ಕಳುಹಿಸಿ ಸಂಬಂಧಿಗಳ ಕೀಳು ಮನಸ್ಥಿತಿ ಬದಲಾಯಿಸಿಕೊಳ್ಳವಂತೆ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಾರೆ.
ಹೊಸ ವರ್ಷಾಚರಣೆಯ ಪ್ಲಾನಿಂಗ್ಸ್ ಮಾಡಿಕೊಂಡಿದ್ದ ಬೆಂಗಳೂರಿಗರಿಗೆ ಶಾಕ್ ಕೊಟ್ಟ ಬಿಬಿಎಂಪಿ..!
ಅಷ್ಟೇ ಅಲ್ಲ ದಿಟ್ಟತನದಿಂದ ತಾವುತೆಗೆದುಕೊಂಡಿದ್ದ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲೂ ಹಂಚಿಕೊಂಡಿರುವ ಪುಷ್ಪಕ್ , ‘ನನ್ನ ಸಂಬಂಧಿಗಳಲ್ಲಿ ಅನೇಕರ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಿದ್ದಾರೆ. ಅವರಲ್ಲಿ ಹಲವರು ಆ ಪಾರ್ಟಿಯಲ್ಲಿದ್ದರು. ನನ್ನ ಅಮ್ಮನಿಗೆ ಅವಮಾನವಾಗುತ್ತಿದ್ದರೂ, ಅವರು ಒಂದೇ ಒಂದು ಮಾತಾಡಿಲ್ಲ. ನನ್ನನ್ನು ನೋಡಿ, ಮುಖದ ತುಂಬಾ ಗಡ್ಡವಿರುವ ನಾನು ರೆಡ್ ಲಿಪ್ಸ್ಟಿಕ್ ಹಚ್ಚಿಕೊಂಡಿದ್ದೇನೆ. ನಾನು ಈ ಮೂಲಕ ಎಲ್ಲ ತಾಯಂದಿರ, ಅಕ್ಕ ತಂಗಿಯರ, ಮಹಿಳೆಯರ ಪರವಾಗಿ ನಿಲ್ಲುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
viral
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel