ಇತ್ತೀಚೆಗಿನ ಪ್ರಮುಖ ಇಂಟರೆಸ್ಟಿಂಗ್ ಸುದ್ದಿಗಳು..!
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ ) ಲಿಂಕ್ ಗಳನ್ನ ಕ್ಲಿಕ್ ಮಾಡಿ
ಮತಾಂತರ ಆಗಿಹೋಗಿದೆ.. ಮುಸ್ಲಿಂ ಆಗಿದ್ದೇನೆ.. 3 ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ..!
ಉತ್ತರ ಪ್ರದೇಶ: ಯುಪಿಯಲ್ಲಿ ನೂತನ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಭಜರಂಗದಳದವರು ಎಲ್ಲೆಡೆ ಚುರುಕಾಗಿದ್ದಾರೆ. ಆಮಿಷ ಒಡ್ಡಿ, ಬಲವಂತವಾಗಿ, ಬೆದರಿಕೆ ಹಾಕಿ ಮತಾಂತರ ಮಾಡಿ ಮದುವೆ ಮಾಡಿಕೊಂಡಿರುವ ಪ್ರಕರಣಗಳ ಆರೋಪಿಗಳನ್ನ ಹಿಡಿದು ಜೈಲಿಗಟ್ಟುತ್ತಿದ್ದಾರೆ. ಇಂತಹದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ರಶೀದ್ ಅಲಿ ಎಂಬ ಯುವಕನನ್ನೂ ಇದೇ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಆದ್ರೆ ಮತಾಂತರ ಆಗಿ ಹೋಗಿದೆ. ನಾನೀಗ 3 ತಿಂಗಳ ಗರ್ಭಿಣಿ ದಯಮಾಡಿ ನನ್ನ ಪತಿಯನ್ನ ಬಿಟ್ಟುಬಿಡಿ ಎಂದು ಆತನ ಪತ್ನಿ 21 ವರ್ಷದ ಯುವತಿ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳು
ಮಂಗಳೂರು, ಡಿಸೆಂಬರ್15: ಆರೋಗ್ಯಕರ ಜೀವನವನ್ನು ನಡೆಸಲು ಹೆಚ್ಚಿನ ಶಕ್ತಿಯನ್ನು ಹೊಂದಿರುವ ಆಹಾರಗಳು ಸಾಮಾನ್ಯವಾಗಿ ಒಳ್ಳೆಯದು. ಪ್ರತಿದಿನ ಸೇವಿಸಬೇಕಾದ ಅತ್ಯಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅನೇಕ ಭಾರತೀಯ ಸೂಪರ್ಫುಡ್ಗಳಿವೆ. ಇಲ್ಲಿ ನಾವು ಕೆಲವು ಸಾಂಪ್ರದಾಯಿಕ ಆಹಾರಗಳನ್ನು ಹೆಸರಿಸಿದ್ದೇವೆ. ಈ ಆಹಾರಗಳನ್ನು ಚಯಾಪಚಯ ಕಾರ್ಯವನ್ನು ಹೆಚ್ಚಿಸಲು ನಮ್ಮ ನಿಯಮಿತ ಅಡುಗೆಯಲ್ಲಿ ಬಳಸುವ ಅಭ್ಯಾಸ ಒಳ್ಳೆಯದು. ನಿಮ್ಮ ದೈನಂದಿನ ಜೀವನದಲ್ಲಿ ಇರಬೇಕಾದ ಇಂತಹ ಆಹಾರಗಳ ಬಗ್ಗೆ ತಿಳಿಯೋಣ
ನೆಲ್ಲಿಕಾಯಿ – ನೆಲ್ಲಿಕಾಯಿಯನ್ನು ಸೂಪರ್ಫುಡ್ ಗಳಲ್ಲಿ ಒಂದು ಎಂದು ಹೇಳಲಾಗಿದೆ .ಇದರಲ್ಲಿನ ಉತ್ಕರ್ಷಣ ನಿರೋಧಕ ಗುಣವು ಬೆರ್ರಿ ಅಥವಾ ದಾಳಿಂಬೆಗಿಂತ ಹೆಚ್ಚಾಗಿದೆ ಎಂದು ನಂಬಲಾಗಿದೆ. ಅಲ್ಲದೆ, ಇದು ಕಿತ್ತಳೆಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಯಿಂದ ತುಂಬಿರುತ್ತದೆ. ನೆಲ್ಲಿಕಾಯಿಯಲ್ಲಿನ ಪೋಷಕಾಂಶಗಳು ಕಣ್ಣಿನ ದೃಷ್ಟಿಯನ್ನು ಉತ್ತೇಜಿಸುತ್ತದೆ, ನೋವನ್ನು ನಿವಾರಿಸುತ್ತದೆ ಮತ್ತು ಯಾವುದೇ ದೀರ್ಘಕಾಲದ ಪರಿಸ್ಥಿತಿಗಳನ್ನು ಎದುರಿಸಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. continue and click link to read full article
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳು
ಮಂಗಳೂರು, ಡಿಸೆಂಬರ್15: ಅನೇಕರು ರಾತ್ರಿ ವೇಳೆ ಮೊಬೈಲ್ ಫೋನ್ ಅನ್ನು ಚಾರ್ಜಿಂಗ್ಗೆ ಹಾಕಿ ನಿದ್ದೆ ಮಾಡುತ್ತಾರೆ. ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಓವರ್ ಚಾರ್ಜಿಂಗ್ ನಿಂದ ಮೊಬೈಲ್ ಫೋನ್ ಸಿಡಿಯುವ ಅಪಾಯವಿದೆ. ಓವರ್ ಚಾರ್ಜಿಂಗ್ ಮೊಬೈಲ್ ಫೋನ್ ಗೆ ಅಪಾಯಕಾರಿ:
ಜನರು ತಮ್ಮ ಮೊಬೈಲ್ ಫೋನ್ಗಳನ್ನು ಚಾರ್ಜಿಂಗ್ಗೆ ಇಟ್ಟು ಬಳಿಕ ನಿದ್ರೆಗೆ ಜಾರುತ್ತಾರೆ. ಆದರೆ ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ (Mobile Charging) ನಲ್ಲಿ ಇರುವ ಹಿನ್ನೆಲೆಯಲ್ಲಿ ಬ್ಯಾಟರಿ ತಾಪವು ಹೆಚ್ಚಾಗಿ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಓವರ್ ಚಾರ್ಜಿಂಗ್ ಮೊಬೈಲ್ ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುವ ಜೊತೆಗೆ ಫೋನ್ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಫೋನ್ನನ್ನು ಅದರ ರಕ್ಷಣಾತ್ಮಕ ಕವರ್ ಜೊತೆಗೆ ಚಾರ್ಜ್ ಗೆ ಇಡಬೇಡಿ. ಫೋನ್ ಅನ್ನು ಹಾನಿಯಿಂದ ರಕ್ಷಿಸಲು ನಾವು ಯಾವಾಗಲೂ ರಕ್ಷಣಾತ್ಮಕ ಕವರ್ ಹಾಕುತ್ತೇವೆ. ಆದರೆ ತಜ್ಞರ ಪ್ರಕಾರ ಫೋನ್ ಅನ್ನು ರಕ್ಷಣಾತ್ಮಕ ಕವರ್ ಜೊತೆಗೆ ಚಾರ್ಜ್ ಮಾಡುವುದು ಅಪಾಯಕಾರಿ. ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿಯ ಶಾಖ ಹೆಚ್ಚಾಗುವ ಸಾಧ್ಯತೆಯಿದ್ದು, ಅಂತಹ ಪರಿಸ್ಥಿತಿಯಲ್ಲಿ ಸೇಫ್ಟಿ ಕವರ್ ಅಥವಾ ರಕ್ಷಣಾತ್ಮಕ ಕವರ್ ಇದ್ದಾಗ ಬ್ಯಾಟರಿ ಸ್ಫೋಟಗೊಳ್ಳುವ ಅಪಾಯವಿದೆ. continue and click link to read full article