ಶಿವಲಿಂಗಕ್ಕೆ ವಿಚಿತ್ರ ನೈವೇದ್ಯ ಅರ್ಪಿಸಿದ ಭಕ್ತ..!
ಹೈದರಾಬಾದ್ : ಭಕ್ತರು ನಾನಾ ರೀತಿಗಳಲ್ಲಿ ಭಕ್ತಿ ಮೆರೆಯುತ್ತಾರೆ.. ಹರಕೆ ಹೊರುತ್ತಾರೆ.. ಅಂತೆಯೇ ನಾನಾ ವಿಧದ ನೈವೇದ್ಯವನ್ನೂ ನೀಡುತ್ತಾರೆ.. ಆದ್ರೆ ಇಲ್ಲೊಬ್ಬ ಭಕ್ತ ಶಿವಲಿಂಗ ನೈವೇದ್ಯಕ್ಕಾಗಿ 10 ಕೆಜಿ ಐಸ್ ಕ್ರೀಮ್ ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಪಾಲಕೋಲ್‍ನಲ್ಲಿ ನಡೆದಿದೆ. ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ, ಪಾಲಕೋಲಿನ ದೇವೆಲ್ಲ ನರಸಿಂಹ ಮೂರ್ತಿ ಎಂಬ ಭಕ್ತರು ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ಅರ್ಪಿಸಿದ್ದಾರೆ..
2021ನೇ ಸಾಲಿನಲ್ಲಿ – ವಿಶ್ವದ ನಂ 1 ನಟ ಪ್ರಭಾಸ್
ಐಸ್ ಕ್ರೀಮ್ ಅನ್ನು ಶಿವಲಿಂಗದ ಮೇಲೆ ಸುರಿಯಲಾಯಿತು. ಅದು ದೇವರ ಸುತ್ತಲೂ ತುಂಬಿಕೊಂಡಾಗ ಆ ಅದ್ಭುತ ದೃಶ್ಯವನ್ನು ವೀಕ್ಷಿಸಲು ಭಕ್ತರು ಸಾಲುಗಟ್ಟಿ ನಿಂತಿದ್ದರು. ದೇವರ ಪ್ರಸಾದವಾಗಿ ತಣ್ಣನೆಯ ಐಸ್ ಕ್ರೀಮ್ ಅನ್ನು ಪಡೆಯಲು ಭಕ್ತರು ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.







