ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್
ಲಂಡನ್: ತನ್ನ ಮೆದುಳು ಬಳ್ಳಿ ಮತ್ತು ಬೆನ್ನು ಮೂಳೆ ಸರಿಯಾಗಿ ಜೋಡಣೆಯಾದಿರುವಂತಹ ಸ್ಟೈನಾ ಬಿಫಿಡಾ ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್ ಎಂಬ ಮಹಿಳೆ ತನ್ನ ತಾಯಿಯ ಹೆರಿಗೆ ಮಾಡಿಸಿದ ವೈದ್ಯನ ವಿರುದ್ಧವೇ ಕೇಸ್ ದಾಖಲಿಸಿದ್ದ ವಿಚಿತ್ರ ಘಟನೆ ಲಂಡನ್‍ನಲ್ಲಿ ನಡೆದಿದೆ.
ಹೌದು ತನ್ನ ಜನನ ಮಾಡಿಸಿದ ವೈದ್ಯ ಡಾ.ಫಿಲಿಪ್ ವಿರುದ್ಧ 20 ವರ್ಷದ ಇವಿ ಎಂಬಾಕೆ ಕೇಸು ಹಾಕಿದ್ದರು.. ತನ್ನ ತಾಯಿ ಗರ್ಭಿಣಿಯಾಗಿದ್ದಾಗ ವೈದರು ಸರಿಯಾದ ಮಾರ್ಗದರ್ಶನ ನೀಡಿದ್ದರೆ, ಅವರು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರು. ಆಗ ಈ ಸಮಸ್ಯೆ ತನ್ನನ್ನು ಕಾಡುತ್ತಿರಲಿಲ್ಲ.
ಆದರೆ ವೈದ್ಯರು ಸರಿಯಾದ ಮಾರ್ಗದರ್ಶನ ನೀಡದೇ ಇದ್ದುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ. ಹೀಗಾಗಿ ನನ್ನ ಆರೋಗ್ಯ ಸಮಸ್ಯೆಗೆ ನನ್ನ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರೇ ಕಾರಣ ಎಂದು ಪ್ರಕರಣ ದಾಖಲಿಸಿಕೇಸ್ ಕೂಡ ಗೆದ್ದಾದ್ದಾಳೆ ಯುವತಿ..
ಲಂಡನ್ ಹೈಕೋರ್ಟ್, ಇವರ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪುನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.