Viral : ಕರಡಿ ಬಾಯಿಗೆ ಮಗಳನ್ನೇ ನೂಕಿದ ತಾಯಿ: ರಕ್ಷಿಸಿದ ಸಿಬ್ಬಂದಿ..!!!
ಮಹಿಳೆಯೊಬ್ಬಳು ತನ್ನ 3 ವರ್ಷದ ಸ್ವಂತ ಮಗಳನ್ನೇ ಕರಡಿ ಬಾಯಿಗೆ ನೂಕಿರುವ ಆಘಾತಕಾರಿ ಘಟನೆಯೊಂದು ಉಜ್ಬೇಕಿಸ್ತಾನ್‍ನಲ್ಲಿ ನಡೆದಿದೆ.. ಈ ಶಾಕಿಂಗ್ ವಿಡಿಯೋ ಸೋಷಿಯಲ್ ದಲ್ಲಿ ವೈರಲ್ ಆಗ್ತಿದ್ದು ನೆಟ್ಟಿಗರು ಇಂತಹ ತಾಯಿ ಇರುತ್ತಾರಾ ಎಂದೆಲ್ಲಾ ಕಮೆಂಟ್ ಗಳನ್ನ ಮಾಡ್ತಾ ಆಕ್ರೋಶ ಹೊರಹಾಕುತ್ತಿದ್ದಾರೆ.
ಉಜ್ಬೇಕಿಸ್ತಾನ್ ನಲ್ಲಿ ತಾಷ್ಕೆಂಟ್ ಮೃಗಾಲಯಕ್ಕೆ ತಾಯಿ ತನ್ನ ಮಗಳೊಂದಿಗೆ ಬಂದಿದ್ದಾಳೆ. ಈ ವೇಳೆ ಬಾಲಕಿ ಕರಡಿ ನೋಡುತ್ತ ಕಂಬಿ ಹಿಡಿದು ನಿಂತಿರುತ್ತಾಳೆ. ಆಗ ತಾಯಿ ಹಿಂದೆಯಿಂದ ಬಾಲಕಿಯ ಕೈಯನ್ನು ಕಂಬಿಯಿಂದ ಬಿಡಿಸಿ ಕರಡಿ ಇದ್ದ ಜಾಗಕ್ಕೆ ಬಿಸಾಡಿದ್ದಾಳೆ. 3 ವರ್ಷದ ಬಾಲಕಿ 16 ಅಡಿಯಿಂದ ಕೆಳಗೆ ಕರಡಿ ಇದ್ದ ಜಾಗಕ್ಕೆ ಬಿದ್ದಾಗ ಕರಡಿ ಬಾಲಕಿ ಬಿದ್ದ ಜಾಗಕ್ಕೆ ಓಡಿ ಹೋಗಿದೆ. ಆದ್ರೆ ಅಷ್ಟರಲ್ಲೇ ಮೃಗಾಲಯದ ಸಿಬ್ಬಂದಿ ಬಾಲಕಿಯನ್ನು ರಕ್ಷಣೆ ಮಾಡಲು ಕರಡಿ ಇದ್ದ ಜಾಗಕ್ಕೆ ಓಡಿಹೋಗಿ ಆಕೆಯನ್ನ ರಕ್ಷಿಸಿದ್ದಾರೆ. ಬಾಲಕಿಗೆ ಕರಡಿ ಏನು ಮಾಡಿಲ್ಲ. ಆದ್ರೆ ಅಷ್ಟು ಎತ್ತರದಿಂದ ಬಿದ್ದ ಕಾರಣಕ್ಕೆ ಬಾಲಕಿಗೆ ಸ್ಪಲ್ಪ ಗಾಯವಾಗಿದೆ ಎಂದು ವರದಿಯಾಗಿದೆ. ತಾಯಿಯ ವಿರುದ್ಧ ಕೊಲೆ ಆರೋಪ ಹೊರಿಸಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ..
VIEWER DISCRETION IS ADVISED!
CCTV footage shows a woman throwing her daughter into a bear's enclosure in Uzbekistan's Tashkent Zoo.
The toddler was not harmed by the bear, but she was hospitalized with injuries due to the fall.
The woman’s motivation has remained unclear. pic.twitter.com/R5c4aDzSFA
— Press TV 🔻 (@PressTV) February 1, 2022
viral : mother pushes daughter in bear’s cage – saakshatv








