ಅಂತ್ಯಕ್ರಿಯೆಗೂ ಮುನ್ನ ಕಣ್ಣು ಬಿಟ್ಟ 102 ವರ್ಷದ ಅಜ್ಜಿ….
ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಎಲ್ಲಾ ರೀತಿಯ ಸಿದ್ಧತೆಗಳನ್ನ ನಡೆಸಲಾಗಿತ್ತು. ಅಷ್ಟರಲ್ಲೆ ಸಾವನ್ನಪ್ಪಿದ್ದ ಅಜ್ಜಿಯ ದೇಹದಲ್ಲಿ ಚಲನೆ ಉಂಟಾಗಿದೆ. ಈ ಘಟನೆ ಎಲ್ಲರಲ್ಲೂ ಆಶ್ಚರ್ಯ ತರುವಷ್ಟರಲ್ಲಿ ವಯಸ್ಸಾದ ಅಜ್ಜಿ ನಿಧಾನವಾಗಿ ಕಣ್ಣು ತರೆದಾಗ ಮನೆಯವರಿಗಾದ ಖುಷಿ ಅಷ್ಟಿಷ್ಟಲ್ಲ. ಈ ಘಟನೆಯ ನಂತರ ಊರಿನವರೆಲ್ಲ ಬಂದು ಅಜ್ಜಿಯನ್ನ ನೋಡಿಕೊಂಡು ಹೋಗಿದ್ದಾರೆ.
ಈ ಘಟನೆ ನಡೆದಿರುವುದು ಡೆಹರಾಡೂನ್ ನಲ್ಲಿ. ರೂರ್ಕಿ ವ್ಯಾಪ್ತಿಯಲ್ಲಿ ಬರುವ ನರ್ಸದ್ ಖುರ್ದ್ ನಿವಾಸಿ ವಿನೋದ್ ಅವರ ತಾಯಿ ಜ್ಞಾನ್ ದೇವಿ (102) ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ದಿಢೀರನೆ ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆ. ಮನೆಯವರು ವೈದ್ಯರನ್ನು ಕರೆಸಿ ವೃದ್ಧರನ್ನು ಪರೀಕ್ಷಿಸಿ, ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಸುದ್ದಿಯ ನಂತರ ಕುಟುಂಬ ಸಮೇತರಾಗಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ತಾಯಿಯ ಸಾವಿನ ಬಗ್ಗೆ ಕುಟುಂಬಸ್ಥರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಅಪಾರ ಸಂಖ್ಯೆಯಲ್ಲಿ ಜನರು ಮನೆಯಲ್ಲಿ ಜಮಾಯಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದರು.
ಮಗ ವಿನೋದ್ ಕುಮಾರ್ ಪ್ರಕಾರ, “ಕುಟುಂಬದವರು ತಾಯಿಯ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಲಾಗಿದೆ. ಅಂತಿಮ ಸಂಸ್ಕಾರಕ್ಕೆಂದು ಶವ ತೆಗೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ತಾಯಿಯ ದೇಹದಲ್ಲಿ ಸ್ವಲ್ಪ ಚಲನವಲನ ಉಂಟಾಯಿತು. ಸ್ವಲ್ಪ ಅಲುಗಾಡಿದ ನಂತರ ತಾಯಿ ಕಣ್ಣು ತೆರೆದರು. “ಅಮ್ಮನಿಗೆ ಪ್ರಜ್ಞೆ ಬಂದ ತಕ್ಷಣ, ಇಡೀ ವಾತಾವರಣವು ಸಂತೋಷಕ್ಕೆ ತಿರುಗಿತು ಎಂದು ಮಗ ವಿನೋದ್ ಕುಮಾರ್ ಹೇಳಿದ್ದಾರೆ.
ಅವರ ಕುಟುಂಬದಲ್ಲಿ ಮಾತ್ರವಲ್ಲದೆ ಇಡೀ ಹಳ್ಳಿಯಲ್ಲಿಯೇ ಅವರು ಹಿರಿಯ ಮಹಿಳೆ ಆಗಿದ್ದರಿಂದ ಇಡೀ ಊರೂ ಅಜ್ಜಿ ಬದುಕಿ ಬಂದಿದ್ದನ್ನ ಸಂಭ್ರಮಿಸುತ್ತಿದೆ.
Viral News : 102-year-old ‘dead’ woman revives shortly before funeral preparations