ಬೇಟೆಗೆ ಹೋದ ವ್ಯಕ್ತಿಗೆ ಗುಂಡು ಹಾರಿಸಿ ಕೊಂದ ಸಾಕು ನಾಯಿ….
ನಾಯಿಯೊಂದು ಬಂದೂಕು ಹಿಡಿದು ಗುಂಡು ಹಾರಿಸಿದೆ ಎಂದರೇ ನೀವು ನಂಬುತ್ತೀರಾ ? ನಂಬಲೇ ಬೇಕು. ಅಮೇರಿಕಾದಲ್ಲಿ ಶೂಟೌಟ್ ಪ್ರಕರಣಗಳು ಹೊಸತೇನಲ್ಲ, ಅಲ್ಲಿನ ಮಂದಿಗೆ ಗನ್ ಕಲ್ಚರ್ ಹವ್ಯಾಸ ಹೆಚ್ಚೇ ಇದೆ. ಆದರೇ ಈ ಪ್ರಕರಣದಲ್ಲಿ ಸಾಕು ನಾಯಿಯೊಂದು ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಅಮೆರಿಕದಲ್ಲಿ ಸಾಕು ನಾಯಿಯೊಂದು 30 ವರ್ಷದ ವ್ಯಕ್ತಿಯನ್ನು ಕೊಂದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ನಾಯಿ ಆಕಸ್ಮಿಕವಾಗಿ ಹಿಂದಿನ ಸೀಟಿನಲ್ಲಿ ಇಟ್ಟಿದ ಬಂದೂಕಿನ ಮೇಲೆ ಕಾಲಿಟ್ಟಿದೆ. ಬುಲೆಟ್ ಫೈಯರ್ ಆಗಿ ಮುಂದಿನ ಸೀಟಿನಲ್ಲಿ ಕುಳಿತದ್ದ ವ್ಯಕ್ತಿಗೆ ನೇರವಾಗಿ ಗುಂಡು ತಗುಲಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೇ ಇದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ನಾಯಿಯ ಹೆಸರನ್ನಿಟ್ಟು ದಾರಿತಪ್ಪಿಸಿರುವ ಅನುಮಾನವೂ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆ ವೇಳೆ ಬೇಟೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಅಮೆರಿಕದಲ್ಲಿ ಆಕಸ್ಮಿಕ ಗುಂಡಿನ ದಾಳಿಗಳು ನಡೆಯುತ್ತಲೇ ಇರುತ್ತವೆ. ಗನ್ ಇಟ್ಟುಕೊಳ್ಳುವಿಕೆಯನ್ನ ಕಾನೂನು ಬದ್ಧಗೊಳಿಸಿರುವ ಹಿನ್ನಲೆಯಲ್ಲಿ ಅಮೆರಿಕಾದಲ್ಲಿ ಬಂದೂಕು ಮಾಲಿಕರ ಸಂಖ್ಯೆ ಹೆಚ್ಚಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಶೂಟಿಂಗ್ ಸಂಬಂಧಿತ ಅವಘಡಗಳಿಂದಾಗಿ ಪ್ರತಿ ವರ್ಷ ಅಂದಾಜು 500 ಜನರು ಸಾಯುತ್ತಾರೆ.
Viral News : A pet dog shot and killed a man who went hunting….